Select Your Language

Notifications

webdunia
webdunia
webdunia
webdunia

ಚನ್ನಪಟ್ಟಣದಲ್ಲಿ ಹೆಚ್.ಡಿ.ಕೆ ವಿರುದ್ಧ ಕಾಂಗ್ರೆಸ್ ಆಕಾಂಕ್ಷಿ ವಾಗ್ದಾಳಿ

ಚನ್ನಪಟ್ಟಣದಲ್ಲಿ ಹೆಚ್.ಡಿ.ಕೆ ವಿರುದ್ಧ ಕಾಂಗ್ರೆಸ್ ಆಕಾಂಕ್ಷಿ ವಾಗ್ದಾಳಿ
ರಾಮನಗರ: , ಬುಧವಾರ, 4 ಏಪ್ರಿಲ್ 2018 (18:37 IST)
ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಸಿಎಂ ಹೆಚ್ ಡಿ.ಕುಮಾರಸ್ವಾಮಿ ಸ್ಪರ್ಧೆಯಿಂದಾಗಿ ತೀವ್ರ ಕುತೂಹಲಕ್ಕೆ ಕಾರಣವಾಗಿರುವ ಬೊಂಬೆನಗರಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಇಂದು ಕಾಂಗ್ರೆಸ್ ಅಧಿಕೃತ ಆಖಾಡ‌ ಪ್ರವೇಶ ಮಾಡಿದೆ.  
ಕಾಂಗ್ರೆಸ್ ನ ಅಭ್ಯರ್ಥಿ ಯಾಗಲಿರುವ ಎಸ್. ಗಂಗಾಧರ್ ಇತಿಹಾಸ ಪ್ರಸಿದ್ಧ ಆಂಜನೇಯ ಸ್ವಾಮಿ ಸನ್ನಿಧಿಯಲ್ಲಿ ಪೂಜೆಸಲ್ಲಿಸಿದರು. ನಗರದ ಹಲವು ಅಲ್ಪಸಂಖ್ಯಾತರ ವಾರ್ಡ್ ಗಳಲ್ಲಿ ಪ್ರಚಾರ ಆರಂಭಿಸಿದರು. 
 
ತಾಲೂಕಿನ ಪ್ರತಿ ಮನೆಗಳಿಗೂ ನಮ್ಮ ಸರ್ಕಾರದ ಸವಲತ್ತುಗಳು ದೊರಕಿದ್ದು, ಅದಲ್ಲದೇ ತಾಲೂಕಿನ ಎಲ್ಲಾ ಅಲ್ಪಸಂಖ್ಯಾತ ಹಾಗೂ ಹಿಂದುಳಿದ ವರ್ಗದ ಜನತೆ ನನ್ನನ್ನು ಬೆಂಬಲಿಸಲ್ಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 
 
ಈ ಕ್ಷೇತ್ರದಲ್ಲಿ ಕಾಂಗ್ರೆಸ್- ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿದೆ ಎನ್ನುವುದು ಸುಳ್ಳು. ಹೆಚ್.ಡಿ.ಕೆ ರಾಮನಗರದಲ್ಲಿ ಸೋಲುವ ಭೀತಿಯಿಂದ ಚನ್ನಪಟ್ಟಣದಲ್ಲಿ ಸ್ಪರ್ಧೆ ಮಾಡುತ್ತಿದ್ದಾರೋ ಅಥವಾ ಚನ್ನಪಟ್ಟಣ ದಲ್ಲಿ ತಮ್ಮ ಪಕ್ಷದಲ್ಲಿ ಅಭ್ಯರ್ಥಿಗಳಿಲ್ಲದೇ ಬಂದಿದ್ದಾರೋ ಎನ್ನುವುದು ಗೊತ್ತಿಲ್ಲ ಎಂದು ಟೀಕೆ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಾಗಸಾಧುಗಳಿಂದ ರಾಜಕಾರಣಿಗಳ ಭೇಟಿ