ಪ್ರಧಾನಿ ಮೋದಿಗೆ ಸಿಎಂ ಎಚ್ ಡಿಕೆ ಬರೆದ ಪತ್ರದಲ್ಲಿ ಏನಿದೆ ಗೊತ್ತಾ? ಇಲ್ಲಿದೆ ನೋಡಿ ಪ್ರತಿ

Webdunia
ಮಂಗಳವಾರ, 14 ಆಗಸ್ಟ್ 2018 (09:13 IST)
ಬೆಂಗಳೂರು: ಪ್ರತೀ ವರ್ಷ ಬೆಂಗಳೂರಿನಲ್ಲಿ ನಡೆಯುವ ಏರ್ ಶೋ ಈ ಬಾರಿ ಲಕ್ನೋಗೆ ಸ್ಥಳಾಂತರಿಸುವ ಕುರಿತು ಕೇಂದ್ರ ಸರ್ಕಾರ ಚಿಂತನೆ ನಡೆಸಿರುವ ಬೆನ್ನಲ್ಲೇ ರಾಜ್ಯ ಸರ್ಕಾರ ಕೇಂದ್ರದ ಮೇಲೆ ಒತ್ತಡ ಹೇರಲು ಮುಂದಾಗಿದೆ.

ಈಗಾಗಲೇ ವಿಪಕ್ಷ ಬಿಜೆಪಿ ಮತ್ತು ಆಡಳಿತಾರೂಢ ಕಾಂಗ್ರೆಸ್-ಜೆಡಿಎಸ್ ನಡುವೆ ಈ ವಿಚಾರ ಕೆಸರೆರಚಾಟಕ್ಕೆ ಕಾರಣವಾಗಿದೆ. ರಾಜಕೀಯ ಲಾಭಕ್ಕಾಗಿ ಕೇಂದ್ರ ಏರ್ ಶೋ ಸ್ಥಳಾಂತರಿಸುತ್ತಿದೆ ಎಂದು ರಾಜ್ಯ ಸರ್ಕಾರ ಆರೋಪಿಸುತ್ತಿದೆ.

ಇದರ ಬೆನ್ನಲ್ಲೇ ಸಿಎಂ ಕುಮಾರಸ್ವಾಮಿ ಪ್ರಧಾನಿ ಮೋದಿಗೆ ಏರ್ ಶೋ ಸ್ಥಳಾಂತರಿಸದಂತೆ ಪತ್ರ ಬರೆದಿದ್ದಾರೆ. ಕಳೆದ ಕೆಲವಾರು ವರ್ಷಗಳಿಂದ ಭಾರತದ ಮಿಲಿಟರಿ ಚಟುವಟಿಕೆಗಳಿಗೆ ಪ್ರಮುಖ ಕೇಂದ್ರವಾಗಿರುವ ಬೆಂಗಳೂರಿನಿಂದ ಏರ್ ಶೋ ಯಾವುದೇ ಕಾರಣಕ್ಕೂ ಸ್ಥಳಾಂತರಿಸದಂತೆ ಸಿಎಂ ಪತ್ರದಲ್ಲಿ ಮನವಿ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಈ ಕುರಿತಾಗಿ ತಾವು ಮಧ್ಯಸ್ಥಿಕೆ ವಹಿಸಬೇಕು ಎಂದು ಪ್ರಧಾನಿ ಮೋದಿಗೆ ಸಿಎಂ ಎಚ್ ಡಿಕೆ ಆಗ್ರಹಿಸಿದ್ದಾರೆ.

ಒಂದೆಡೆ ರಾಜ್ಯ ಬಿಜೆಪಿ ಅಧ್ಯಕ್ಷ ತಾವೂ ಕೂಡಾ ಕೇಂದ್ರದ ಮೇಲೆ ಈ ಬಗ್ಗೆ ಒತ್ತಡ ಹೇರುವುದಾಗಿ ಹೇಳಿಕೊಂಡಿದ್ದಾರೆ. ಹಾಗಿದ್ದರೂ ಲಕ್ನೋದಲ್ಲಿ ಏರ್ ಶೋ ನಡೆಸಲು ಈಗಾಗಲೇ ತಯಾರಿ ನಡೆದಿರುವುದು ರಾಜ್ಯದ ಆತಂಕಕ್ಕೆ ಕಾರಣವಾಗಿದೆ.







ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನನ್ನೊಂದಿಗೆ ಆಟವಾಡಲು ಬರಬೇಡಿ: ಕೇಂದ್ರದ ವಿರುದ್ಧ ಬ್ಯಾನರ್ಜಿ ಕಿಡಿ

ಈ ಬಗ್ಗೆ ಸಾರ್ವಜನಿಕವಾಗಿ ಚರ್ಚಿಸಲ್ಲ: ಮಲ್ಲಿಕಾರ್ಜುನ ಖರ್ಗೆ ಹಿಂಗದಿದ್ಯಾಕೆ

ದೇಶದ ಎರಡನೇ ಅತಿದೊಡ್ಡ ಮೀನು ಉತ್ಪಾದನಾ ರಾಜ್ಯವಾಗಿ ಗುಜರಾತ್

ಶಾಸಕರ ಖರೀದಿಗೆ ಹಣವಿದೆ, ರೈತರ ಸಂಕಷ್ಟಕ್ಕಿಲ್ಲ: ಜಗದೀಶ್ ಶೆಟ್ಟರ್ ಆಕ್ರೋಶ

ತಾತ್ಕಾಲಿಕ ಸಿಎಂ ಬೇಡ, ರೈತರ ಸಮಸ್ಯೆಗೆ ಸ್ಪಂದಿಸುವ ಮುಖ್ಯಮಂತ್ರಿ ಬೇಕು: ಬಿವೈ ವಿಜಯೇಂದ್ರ

ಮುಂದಿನ ಸುದ್ದಿ
Show comments