Select Your Language

Notifications

webdunia
webdunia
webdunia
webdunia

ಅಂತಿಮ ಭಾಷಣಕ್ಕೆ ಸಿದ್ಧರಾದರೇ ಸಿಎಂ ಬಿಎಸ್ ವೈ?!!

ಅಂತಿಮ ಭಾಷಣಕ್ಕೆ ಸಿದ್ಧರಾದರೇ ಸಿಎಂ ಬಿಎಸ್ ವೈ?!!
ಬೆಂಗಳೂರು , ಶನಿವಾರ, 19 ಮೇ 2018 (13:42 IST)
ಬೆಂಗಳೂರು: ತಮ್ಮ ಸರ್ಕಾರ ವಿಶ್ವಾಸ ಮತ ಗೆಲ್ಲದಂತೆ ನಾಲ್ಕೂ ಕಡೆಗಳಿಂದ ಬಂಧನವಾಗುತ್ತಿದ್ದಂತೇ ಸಿಎಂ ಯಡಿಯೂರಪ್ಪ ತಮ್ಮ ಮೂರು ದಿನಗಳ ಸಿಂ ಹುದ್ದೆಗೆ ರಾಜೀನಾಮೆ ನೀಡಲು ಸಿದ್ಧತೆ ನಡೆಸಿದ್ದಾರೆಯೇ?

ವಿಶ್ವಾಸ ಮತ ಕಳೆದುಕೊಂಡರೆ ಸದನದಲ್ಲಿ ಭಾಷಣ ಮಾಡಲು 13 ಪುಟಗಳ ಭಾಷಣದ ಪ್ರತಿಯನ್ನು ಬಿಎಸ್ ವೈ ಸಿದ್ಧತೆ ಮಾಡುತ್ತಿದ್ದಾರೆ ಎನ್ನಲಾಗಿದೆ. ಇದರಲ್ಲಿ ತಾವು ಅಧಿಕಾರದಲ್ಲಿದ್ದಿದ್ದರೆ ಮಾಡಬಹುದಾಗಿದ್ದ ಕಾರ್ಯಗಳ ಬಗ್ಗೆ ಹೇಳಲಿದ್ದಾರೆ ಎನ್ನಲಾಗಿದೆ.

ಆ ಮೂಲಕ ಅಧಿಕಾರದಿಂದ ಕೆಳಗಿಳಿಯುವ ಮೊದಲು ಭಾವನಾತ್ಮಕ ಭಾಷಣ ಮಾಡುವ ಯೋಜನೆ ಬಿಎಸ್ ವೈಗಿದೆ ಎನ್ನಲಾಗಿದೆ. ಅದೇನೇ ಇರಲಿ, ಇನ್ನೊಂದೆಡೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ತಲೆಕೆಡಿಸಿಕೊಳ್ಳದಂತೆ ಯಡಿಯೂರಪ್ಪನವರಿಗೆ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಸದ್ಯಕ್ಕೆ ಕಲಾಪ ಮುಂದೂಡಲಾಗಿದ್ದು, ಮಧ್ಯಾಹ್ನ 3.30 ರ ನಂತರ ಕಲಾಪ ನಡೆಯಲಿದೆ. ಆ ಬಳಿಕ ಯಡಿಯೂರಪ್ಪ ಸರ್ಕಾರದ ಭವಿಷ್ಯ ತಿಳಿಯಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಶಾಸಕರನ್ನು ಹುಡುಕಿಕೊಂಡು ಹೋಟೆಲ್ ಗೇ ಬಂದ ಪೊಲೀಸರು!