ಮುಖ್ಯಮಂತ್ರಿ ಸಿದ್ದರಾಮಯ್ಯ ಮೋಸಗಾರ, ಸುಳ್ಳುಗಾರ. ಇವರಿಗೆ ಬಡವರ ಬಗ್ಗೆ ಯಾವುದೇ ರೀತಿಯ ಕಳಕಳಿ ಇಲ್ಲ- ಜನಾರ್ದನ ರೆಡ್ಡಿ ವಾಗ್ದಾಳಿ

Webdunia
ಗುರುವಾರ, 26 ಏಪ್ರಿಲ್ 2018 (06:51 IST)
ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಮೋಸಗಾರ, ಸುಳ್ಳುಗಾರ. ಇವರಿಗೆ ಬಡವರ ಬಗ್ಗೆ ಯಾವುದೇ ರೀತಿಯ ಕಳಕಳಿ ಇಲ್ಲ. ರಾವಣನ ರೂಪದ ಸಿದ್ದರಾಮಯ್ಯನರ ಸಂಹಾರಕ್ಕೆ ರಾಮನಂತಿರುವ ಶ್ರೀರಾಮುಲು ಬಂದಿದ್ದಾರೆ ಎಂದು ಜನಾರ್ದನ ರೆಡ್ಡಿ ಅವರು ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬುಧವಾರ ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಚಾರದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,’ ಜನಾರ್ದನ ರೆಡ್ಡಿ 1ಲಕ್ಷ ಕೋಟಿ ರೂ.ಲೂಟಿ ಮಾಡಿದ್ದು, ಅದನ್ನು ವಸೂಲಿ ಮಾಡುವೆ ಅಂತ ಹೇಳಿದ್ದ ಸಿಎಂ ಸಿದ್ದರಾಮಯ್ಯ, ಅಧಿಕಾರಕ್ಕೆ ಬಂದು 5 ವರ್ಷಗಳೇ ಕಳೆದರೂ ನನ್ನಿಂದ ಒಂದು ರೂಪಾಯಿಯನ್ನು ಕೂಡ ವಸೂಲಿ ಮಾಡಲು ಆಗಲಿಲ್ಲ. ಜನಾರ್ದನ ರೆಡ್ಡಿ ಕೋಟ್ಯಂತರ ರೂ.ಲೂಟಿ ಮಾಡಿದ್ದಾರೆಂದು ಸಿದ್ದರಾಮಯ್ಯ ಸುಳ್ಳು ಹೇಳುತ್ತಿದ್ದಾರೆ’ ಎಂದು ತಿಳಿಸಿದ್ದಾರೆ.

 

ಅಲ್ಲದೆ ‘ಮೈಸೂರಿನ ಚಾಮುಂಡೇಶ್ವರಿ ಹಾಗೂ ಬನಶಂಕರಿ ತಾಯಿ ಇಬ್ಬರೂ ಸಿದ್ದರಾಮಯ್ಯರಿಗೆ ಆಶೀರ್ವಾದ ಮಾಡುವುದಿಲ್ಲ. ಮೊಳಕಾಲ್ಮೂರು ಕ್ಷೇತ್ರ ಹಾಗೂ ಬಾದಾಮಿ ಕ್ಷೇತ್ರದ ಜನತೆ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಅವರನ್ನು ಅತ್ಯಂತ ಹೆಚ್ಚು ಬಹುಮತಗಳಿಂದ ಗೆಲ್ಲಿಸಲಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರಿಗೆ ಶ್ರೀರಾಮುಲು ಹಾಗೂ ವಿಜಯೇಂದ್ರ ಇಬ್ಬರೂ ಮಕ್ಕಳಿದ್ದಂತೆ ‘ ಎಂದು ಅವರು  ಹೇಳಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ದೆಹಲಿ ಸ್ಫೋಟ ಪ್ರಕರಣ, ಸಾವಿನ ಸಂಖ್ಯೆ 15ಕ್ಕೆ ಏರಿಕೆ

ಕುಟುಂಬದಲ್ಲಿ ಕಲಹದ ನಡುವೆ ವಿರೋಧ ಪಕ್ಷದ ನಾಯಕನಾದ ತೇಜಸ್ವಿ ಯಾದವ್‌

ಮೆಕ್ಕಾ ಯಾತ್ರಿಕರ ಬಸ್ ದುರಂತ: ಪರಿಹಾರ ಘೋಷಿಸಿದ ತೆಲಂಗಾಣ ಸರ್ಕಾರ

6 ವರ್ಷಗಳ ಬಳಿಕ ಭಾರತ, ಚೀನಾ ನಡುವೆ ಏರ್ ಇಂಡಿಯಾ ಹಾರಾಟ ಪುನರಾರಂಭ

ನನ್ನ ವಿರುದ್ಧದ ರಾಜಕೀಯ ಪ್ರೇರಿತ ತೀರ್ಪು: ಬಾಂಗ್ಲಾ ಮಾಜಿ ಪ್ರಧಾನಿ ಹಸೀನಾ

ಮುಂದಿನ ಸುದ್ದಿ
Show comments