Select Your Language

Notifications

webdunia
webdunia
webdunia
webdunia

ವೈವಾಹಿಕ ಜೀವನಕ್ಕೆ ಕಾಲಿಟ್ಟ ಕಾಮಿಡಿ ಕಿಲಾಡಿ ಖ್ಯಾತಿಯ ನಯನಾ

ವೈವಾಹಿಕ ಜೀವನಕ್ಕೆ ಕಾಲಿಟ್ಟ  ಕಾಮಿಡಿ ಕಿಲಾಡಿ ಖ್ಯಾತಿಯ ನಯನಾ
ಬೆಂಗಳೂರು , ಗುರುವಾರ, 26 ಏಪ್ರಿಲ್ 2018 (06:46 IST)
ಬೆಂಗಳೂರು : ‘ಕಾಮಿಡಿ ಕಿಲಾಡಿಗಳು’ ಕಾರ್ಯಕ್ರಮದ ರನ್ನರ್ ಅಪ್ ಆದ ನಯನಾ ಅವರು ಶರತ್ ಎಂಬುವವರು ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.


ಇವರ ವಿವಾಹ ಸಮಾರಂಭವು ಧರ್ಮಸ್ಥಳದ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ನೆರವೇರಿದ್ದು, ಈ ಸಮಾರಂಭದಲ್ಲಿ ಕುಟುಂಬ ಸದಸ್ಯರು ಮತ್ತು ಆಪ್ತರು ಪಾಲ್ಗೊಂಡಿದ್ದರು. ಪತಿ ಶರತ್ ನಯನಾ ಅವರ ದೂರದ ಸಂಬಂಧಿಯಾಗಿದ್ದು, ಮೂಲತಃ ಬೆಂಗಳೂರಿನ ಉದ್ಯಮಿ. ಇವರದ್ದು ಅರೆಂಜ್ಡ್ ಮ್ಯಾರೇಜ್‌ ಆಗಿದ್ದು, ಮದುವೆ ಕಾರ್ಯಕ್ರಮದಲ್ಲಿ ಕಾಮಿಡಿ ಕಿಲಾಡಿಗಳು ವಿನ್ನರ್ ಮತ್ತು ನಟ ಶಿವರಾಜ್ ಕೂಡಾ ಭಾಗವಹಿಸಿ, ಶುಭ ಹಾರೈಸಿದರು. ಇನ್ನೂ ಮದುವೆಯ ಆರತಕ್ಷತೆಯು ಬೆಂಗಳೂರಿನಲ್ಲಿ ನಡೆಯಿತು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

‘ವಿಶ್ವ ಭೂಮಿ ದಿನ’ ವನ್ನು ವಿಶೇಷವಾಗಿ ಆಚರಿಸಿದ ನಟ ಜಗ್ಗೇಶ್