Select Your Language

Notifications

webdunia
webdunia
webdunia
webdunia

ಸಿನಿಮಾ ರಂಗಕ್ಕೆ ಬಂಪರ್ ಕೊಡುಗೆ

ಸಿನಿಮಾ ರಂಗಕ್ಕೆ ಬಂಪರ್ ಕೊಡುಗೆ
ಬೆಂಗಳೂರು , ಶುಕ್ರವಾರ, 4 ಮಾರ್ಚ್ 2022 (14:19 IST)
ಸಿನಿಮಾ ರಂಗಕ್ಕೂ ಬಂಪರ್ ಕೊಡುಗೆ ನೀಡಿದ್ದಾರೆ. ಪ್ರಸ್ತುತ ವಾರ್ಷಿಕ 125 ಚಿತ್ರಗಳಿಗೆ ಕೊಡುತ್ತಿದ್ದ ಸಬ್ಸಿಡಿಯನ್ನು 200ಕ್ಕೆ ಏರಿಸಿದ್ದಾರೆ.
 
ನೆನ್ನೆ ಬೆಂಗಳೂರಿನಲ್ಲಿ ನಡೆದ ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಈ ಕುರಿತು ನಿರ್ಮಾಪಕ ಮತ್ತು ಸಚಿವ ಮುನಿರತ್ನ  ಸುಳಿವು ನೀಡಿದ್ದರು. ಸಿನಿಮಾ ರಂಗ ಎಂದೂ ಮರೆಯಲಾರದಂತಹ ಸುದ್ದಿಯನ್ನು ಮುಖ್ಯಮಂತ್ರಿಗಳು ಕೊಡಲಿದ್ದಾರೆ ಎಂದು ವೇದಿಕೆಯಲ್ಲೇ ಮಾತನಾಡಿದ್ದರು.

175 ಚಿತ್ರಗಳಿಗೆ ವಾರ್ಷಿಕ ಸಬ್ಸಿಡಿ ಕೊಡಿ ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದರು. ಸರಕಾರ ಇನ್ನೂ 25 ಚಿತ್ರಗಳನ್ನು ಸೇರಿಸಿ 200 ಚಿತ್ರಗಳಿಗೆ ಸಬ್ಸಿಡಿ ಕೊಡುವುದಾಗಿ ಬಜೆಟ್ ನಲ್ಲಿ ಘೋಷಿಸಿದ್ದಾರೆ. 

2016ಕ್ಕೂ ಮುನ್ನ ಸರಕಾರ ವಾರ್ಷಿಕ ನೂರು ಚಿತ್ರಗಳಿಗೆ ಮಾತ್ರ ಸಬ್ಸಿಡಿ ನೀಡುತ್ತಿತ್ತು. ಅಂದಿನ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ 100 ಸಿನಿಮಾದಿಂದ 125 ಸಿನಿಮಾಗಳಿಗೆ ಏರಿಕೆ ಮಾಡಿ, ಒಂದೊಂದು ಚಿತ್ರಕ್ಕೆ ತಲಾ 10 ಲಕ್ಷ ರೂಪಾಯಿಯನ್ನು ಸಬ್ಸಿಡಿ ನೀಡುವುದಾಗಿ ಘೋಷಿಸಿದ್ದರು.


Share this Story:

Follow Webdunia kannada

ಮುಂದಿನ ಸುದ್ದಿ

ಬಜೆಟ್ ನಲ್ಲಿ ನೂತನ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಅಸ್ತು