Select Your Language

Notifications

webdunia
webdunia
webdunia
webdunia

ಬಜೆಟ್: ಮೇಕೆದಾಟು ಯೋಜನೆಗೆ ಅನುದಾನ ಘೋಷಣೆ

ಬಜೆಟ್: ಮೇಕೆದಾಟು ಯೋಜನೆಗೆ ಅನುದಾನ ಘೋಷಣೆ
ಬೆಂಗಳೂರು , ಶುಕ್ರವಾರ, 4 ಮಾರ್ಚ್ 2022 (14:02 IST)
ಬೆಂಗಳೂರು : ರಾಜ್ಯಾದ್ಯಂತ ಹೆಚ್ಚು ಸಂಚಲನ ಮೂಡಿಸಿದ ಮೇಕೆದಾಟು ಯೋಜನೆಗೆ  ರಾಜ್ಯ ಸರ್ಕಾರ 2022ನೇ ಸಾಲಿನಲ್ಲಿ ಭಾರೀ ಮೊತ್ತದ ಅನುದಾನ ಘೋಷಣೆ ಮಾಡಿದೆ.

ಮೇಕೆದಾಟು ಯೋಜನೆಗೆ 1,000 ಕೋಟಿ ರೂ., ಎತ್ತಿನಹೊಳೆ ಯೋಜನೆಗೆ 3 ಸಾವಿರ ಕೋಟಿ ರೂ., ಕೃಷ್ಣ ಮೇಲ್ದಂಡೆ 3ನೇ ಹಂತಕ್ಕೆ 5 ಸಾವಿರ ಕೋಟಿ ರೂ. ಹಾಗೂ ಕಳಸಾ ಬಂಡೂರಿ ಯೋಜನೆಗೆ ಸಾವಿರ ಕೋಟಿ ರೂ. ನಿಯೋಜನೆ ಮಾಡುವುದಾಗಿ ಸಿಎಂ ಬೊಮ್ಮಾಯಿ ಘೋಷಿಸಿದ್ದಾರೆ.

ಸಿಎಂ ಬಸವರಾಜ ಬೊಮ್ಮಾಯಿ ವಿಧಾನಸಭೆಯಲ್ಲಿ 2,65,719.92 ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಿದ್ದಾರೆ. ಬಜೆಟ್ ಗಾತ್ರ ಕಳೆದ ಬಾರಿಗಿಂತ ಶೇಕಡಾ 7.7ರಷ್ಟು ಹೆಚ್ಚಳವಾಗಿದೆ. ‘ಜಲ ಜೀವನ್ ಮಿಷನ್’ ಅಡಿ 25 ಲಕ್ಷ ಮನೆಗೆ ನಲ್ಲಿ ನೀರು ನೀಡಲಾಗುತ್ತದೆ

Share this Story:

Follow Webdunia kannada

ಮುಂದಿನ ಸುದ್ದಿ

ಬಜೆಟ್ ನಲ್ಲಿ ಯಾವ ಕ್ಷೇತ್ರಕ್ಕೆ ಎಷ್ಟು ಹಣ ?