ಬೆಂಗಳೂರು : ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮೊದಲ ಬಾರಿಗೆ ಇಂದು (ಮಾರ್ಚ್ 4) ವಿಧಾನಸೌಧದಲ್ಲಿ ಕರ್ನಾಟಕ ಬಜೆಟ್ ಮಂಡನೆ ಮಾಡುತ್ತಿದ್ದಾರೆ.
ರಾಜ್ಯದ ಅಭಿವೃದ್ಧಿಗೆ ಪಂಚಸೂತ್ರಗಳ ಆಧಾರದಲ್ಲಿ ಬಜೆಟ್ ಮಂಡನೆ ಮಾಡಲಾಗಿದೆ. ಸಮಗ್ರ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿ, ದುರ್ಬಲ ವರ್ಗದ ರಕ್ಷಣೆ ಮತ್ತು ಏಳಿಗೆ – ಶಿಕ್ಷಣ, ಉದ್ಯೋಗ, ಆರೋಗ್ಯ ಹಾಗೂ ಸಬಲೀಕರಣ ಕಾರ್ಯಕ್ರಮ,
ಅಭಿವೃದ್ಧಿ ಹಾಗೂ ನವಭಾರತಕ್ಕಾಗಿ ನವ ಕರ್ನಾಟಕ – ಹೊಸ ಚಿಂತನೆ, ಹೊಸ ಚೈತನ್ಯದ ಜತ ಹೊಸ ಮುನ್ನೋಟ ಎಂಬ ನೆಲೆಯಲ್ಲಿ ಪಂಚಸೂತ್ರಗಳ ಆಧಾರದಲ್ಲಿ ಬಜೆಟ್ ಇದೆ.
ಸಮಗ್ರ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿ
1. ದುರ್ಬಲ ವರ್ಗದ ರಕ್ಷಣೆ ಮತ್ತು ಏಳಿಗೆ- ಶಿಕ್ಷಣ, ಉದ್ಯೋಗ, ಆರೋಗ್ಯ, ಸಬಲೀಕರಣ ಕಾರ್ಯಕ್ರಮ
2. ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗೆ ಕಾರ್ಯಕ್ರಮ
3. ವೈಜ್ಞಾನಿಕವಾಗಿ ಗುರುತಿಸಿ ಅಭಿವೃದ್ಧಿಗೆ ಸಂಘಟಿತ ಕಾರ್ಯಕ್ರಮ
4. ಕೃಷಿ, ಕೈಗಾರಿಕೆ, ಸೇವಾವಲಯ ಪಾಲುದಾರಿಕೆ ಜತೆ ಅಭಿವೃದ್ಧಿ
5. ನವಭಾರತಕ್ಕಾಗಿ ನವ ಕರ್ನಾಟಕ- ಹೊಸ ಚಿಂತನೆ, ಹೊಸ ಚೈತನ್ಯದ ಜತೆ ಹೊಸ ಮುನ್ನೋಟ