Publish Date: Fri, 11 May 2018 (13:24 IST)
Updated Date: Fri, 11 May 2018 (13:26 IST)
ಪ್ರಧಾನಿ ಮೋದಿ ಅವರ ಬಗ್ಗೆ ಹಗುರವಾಗಿ ಮಾತನಾಡುವ ಸಿದ್ದರಾಮಯ್ಯ ಮೇಲೆ ಮಾನನಷ್ಟ ಮೊಕದ್ದಮೆ ಹಾಕುವುದಾಗಿ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದ್ದಾರೆ.
ಇಡೀ ರಾಷ್ಟ್ರವೇ ಮೋದಿಯನ್ನು ಗೌರವಿಸುತ್ತದೆ. ಆದರೆ ಐದು ದಿನದೊಳಗೆ ಮನೆಗೆ ಹೋಗುವರ ಬಗ್ಗೆ ನಾನು ಮಾತನಾಡುವುದು ವ್ಯರ್ಥ. ಸಿದ್ದರಾಮಯ್ಯ ವೀರಶೈವ -ಲಿಂಗಾಯತ ಧರ್ಮ ಒಡೆದರು. ಧರ್ಮ ಒಡೆದು ಶಿವಯೋಗಿ ಮಂದಿರದ ಹಾನಗಲ್ ಕುಮಾರೇಶ್ವರವರಿಗೆ ಅಪಮಾನ ಮಾಡಿದ್ದಾರೆ.
ಜನತೆ ಅವರನ್ನ ಕ್ಷಮಿಸೋದಿಲ್ಲ. ಯಡಿಯೂರಪ್ಪ ಮುಖ್ಯಮಂತ್ರಿ ಆಗಬಾರದು ಎಂದು ಒಂದೇ ಉದ್ದೇಶದಿಂದ ಸಿದ್ದರಾಮಯ್ಯ ಜಾತಿ ವಿಷ ಬೀಜ ಬಿತ್ತಿದ್ದಾರೆ. ಜನ ಇದನ್ನ ಕುಂತಲ್ಲಿ ನಿಂತಲ್ಲಿ ಖಂಡಿಸುತ್ತಿದ್ದಾರೆ ಎಂದು ಬಿಎಸ್ ಯಡಿಯೂರಪ್ಪ ಅವರು ವಾಗ್ದಾಳಿ ನಡೆಸಿದ್ದಾರೆ.