Publish Date: Fri, 11 May 2018 (09:10 IST)
Updated Date: Fri, 11 May 2018 (09:12 IST)
ಬೆಂಗಳೂರು: ಮೂರು ದಶಕಗಳ ಹಿಂದೆ ಇದೇ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ರಾಜಕೀಯ ಜೀವನ ಆರಂಭಿಸಿದೆ. ಈಗ ಅಲ್ಲಿಯೇ ಕೊನೆಯ ಬಾರಿಗೊಮ್ಮೆ ಆಶೀರ್ವದಿಸಿ ಎಂದು ಸಿಎಂ ಸಿದ್ದರಾಮಯ್ಯ ಭಾವುಕರಾಗಿ ಟ್ವೀಟ್ ಮಾಡಿದ್ದಾರೆ.
ಚಾಮುಂಡೇಶ್ವರಿ ಕ್ಷೇತ್ರ ಮತ್ತು ಬಾದಾಮಿ ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದರೂ, ಸಿಎಂ ಸಿದ್ದರಾಮಯ್ಯ, ಚಾಮುಂಡೇಶ್ವರಿ ಬಗ್ಗೆ ಹೆಚ್ಚು ಒಲವು ಬೆಳೆಸಿಕೊಂಡಿದ್ದಾರೆ. ಇದಕ್ಕೆ ಕಾರಣ ಸಿಎಂ ಸಿದ್ದರಾಮಯ್ಯರ ಮೊದಲ ಕ್ಷೇತ್ರ ಇದು ಎಂಬುದು.
ಇದೇ ಕಾರಣಕ್ಕೆ ಟ್ವೀಟ್ ಮಾಡಿರುವ ಅವರು ‘ಚಾಮುಂಡೇಶ್ವರಿಯ ಜನರನ್ನು ಭೇಟಿ ಮಾಡುವಾಗ ಪ್ರತೀ ಬಾರಿಯೂ ನನ್ನಲ್ಲಿ ಅಭಿಮಾನ ಉಕ್ಕುತ್ತದೆ. ಇದು ನನ್ನ ಕರ್ಮಭೂಮಿ, ಮೂರು ದಶಕಗಳ ಹಿಂದೆ ರಾಜಕೀಯ ಜೀವನ ಪ್ರಾರಂಭವಾಗಿದ್ದೇ ಇಲ್ಲಿಂದ. ಇದೀಗ ಕೊನೆಯ ಬಾರಿಗೊಮ್ಮೆ ನಿಮ್ಮ ಆಶೀರ್ವಾದ ಬೇಡುತ್ತಿದ್ದೇನೆ’ ಎಂದು ಸಿಎಂ ಮನವಿ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.