ಬೆಂಗಳೂರು : ನವದೆಹಲಿ ಹಾಗೂ ಕರ್ನಾಟಕ ಎಕ್ಸ್ಪ್ರೆಸ್ ರೈಲಿನಲ್ಲಿ ಬಾಂಬ್ ಇರುವ ಕುರಿತಂತೆ ಪೊಲೀಸರಿಗೆ ಮಂಗಳವಾರ ಅಪರಿಚಿತ ವ್ಯಕ್ತಿಯೋರ್ವ ಕರೆ ಮಾಡಿ ತಿಳಿಸಿದ್ದಾನೆ.
ಆಗ್ರಾದ ವ್ಯಕ್ತಿಯೋರ್ವ ಕರ್ನಾಟಕ ಎಕ್ಸ್ಪ್ರೆಸ್ ರೈಲಿನಲ್ಲಿ ಬಾಂಬ್ ಇರುವುದಾಗಿ ಪೊಲೀಸರಿಗೆ ಕರೆ ಮಾಡಿದ್ದಾನೆ. ನಂತರ ರೈಲ್ವೆ ಸಂರಕ್ಷಣಾ ಪಡೆ ಜಿಆರ್ಪಿಗೆ ಎಚ್ಚರಿಕೆ ನೀಡಿದ್ದು, ಕೂಡಲೇ ಶ್ವಾನದಳವನ್ನು ಕರೆಸಿ ರೈಲಿನ ಪ್ರತಿ ಬೋಗಿಗಳಲ್ಲಿ ಪರಿಶೀಲನೆ ನಡೆಸಲಾಯಿತು. ಅಲ್ಲದೇ ಪ್ರಯಾಣಿಕರ ಲಗೇಜ್ಗಳನ್ನು ಸಹ ಮೆಟಲ್ ಡಿಟೆಕ್ಟರ್ನಿಂದ ಸಿಬ್ಬಂದಿ ಪರೀಕ್ಷಿಸಿದರು.
ರೈಲಿನಲ್ಲಿ ಬಾಂಬ್ ಇದೆ ಎಂಬ ಸುದ್ದಿಯಿಂದ 25 ನಿಮಿಷಗಳ ಕಾಲ ರೈಲನ್ನು ನಿಲ್ಲಿಸಲಾಗಿತ್ತು. ಆದರೆ ಸರ್ಕಾರಿ ರೈಲ್ವೆ ಪೊಲೀಸರು ರೈಲಿನಲ್ಲಿ ಯಾವುದೇ ಬಾಂಬ್ ಪತ್ತೆಯಾಗಿಲ್ಲ ಎಂದು ಮಾಹಿತಿ ನೀಡಿದ ಬಳಿಕ ರೈಲು ಸಂಚಾರವನ್ನು ಪುನಾರಂಭಗೊಳಿಸಲಾಯಿತು ಎಂದು ಪೊಲೀಸ್ ವರಿಷ್ಠಾಧಿಕಾರಿ ಮಥುರಾ(ನಗರ) ಮಾರ್ತಾಂಡ್ ಪ್ರಕಾಶ್ ಸಿಂಗ್ ತಿಳಿಸಿದ್ದಾರೆ.