Select Your Language

Notifications

webdunia
webdunia
webdunia
webdunia

ಪಿಎಫ್ಐ ನಿಂದ ಪೊಲೀಸರ ಮೇಲೆ ದಾಳಿ: ವಿಶ್ವ ಹಿಂದೂ ಪರಿಷತ್ ಖಂಡನೆ

ಪಿಎಫ್ಐ ನಿಂದ ಪೊಲೀಸರ ಮೇಲೆ ದಾಳಿ: ವಿಶ್ವ ಹಿಂದೂ ಪರಿಷತ್ ಖಂಡನೆ
bangalore , ಬುಧವಾರ, 15 ಡಿಸೆಂಬರ್ 2021 (20:11 IST)
ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಲ್ಲಿ PFI ಸಂಘಟನೆ ನಡೆಸಿದ ಪೊಲೀಸರ ಮೇಲಿನ ದಾಳಿ ಮತ್ತು ಅಪ್ರಚೋದಿತ ಹಿಂಸಾಚಾರ ಹಾಗೂ ದಾಂಧಲೆ ಖಂಡನೀಯ‌ ಎಂದು ವಿಶ್ವ ಹಿಂದೂ ಪರಿಷತ್ ಹೇಳಿದೆ.
ತಕ್ಷಣವೇ PFI ಸಂಘಟನೆ ನಿಷೇಧಿಸುವಂತೆಯೂ ಅದು ಸರಕಾರವನ್ನು ಆಗ್ರಹಿಸಿದೆ.
ಹಿಂದು ಬಡ ಮೀನು ಮಾರಾಟಗಾರರ ಮೇಲಿನ ಹಲ್ಲೆಗೆ ಸಂಭಂದಿಸಿದ ಪ್ರಕರಣದಲ್ಲಿ PFI ಮುಖಂಡರರನ್ನು ಬಂಧಿಸಲಾಗಿತ್ತು, ಇದನ್ನು ವಿರೋಧಿಸಿ PFI ಸಂಘಟನೆ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಿ ಪೋಲೀಸರ ಮೇಲೆ ಮಾರಾಕಾಸ್ತ್ರದಿಂದ ಹಲ್ಲೆ ನಡೆಸಿರುವುದು ಖಂಡನೀಯ. ತಮ್ಮ ಪ್ರಾಣದ ಹಂಗು ತೊರೆದು ಸಾರ್ವಜನಿಕರನ್ನು ರಕ್ಷಿಸುವ ಪೊಲೀಸ್ ಸಿಬ್ಬಂದಿಗಳ ಮೇಲೆ ದಾಳಿ ಮಾಡಿದ ಪ್ರತಿಯೊಬ್ಬನಿಗೂ ತಕ್ಕ ಶಿಕ್ಷೆಯಾಗಬೇಕು. ಹಾಗೂ ದೇಶದ್ರೋಹಿ ಕೃತ್ಯವೆಸಗುತ್ತಿರುವ PFI ಮತೀಯ ಸಂಘಟನೆಯನ್ನು ಕರ್ನಾಟಕ ಸರ್ಕಾರ ತಕ್ಷಣ ಅಧಿವೇಶನದ ಈ ಸಂದರ್ಭದಲ್ಲಿ ನಿಷೇಧ ಮಾಡಬೇಕು ಎಂದು ಸರ್ಕಾರಕ್ಕೆ ವಿಶ್ವ ಹಿಂದೂ ಪರಿಷದ್ ಆಗ್ರಹಿಸುತ್ತದೆ ಎಂದು ವಿಭಾಗ ಕಾರ್ಯದರ್ಶಿ ಶರಣ್ ಪಂಪುವೆಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪೊಲೀಸರಿಗೆ 10 ಸಾವಿರ ಮನೆ ನಿರ್ಮಾಣ: ಆರಗ ಜ್ಞಾನೇಂದ್ರ