Webdunia - Bharat's app for daily news and videos

Install App

ಆರೆಸ್ಸೆಸ್ ಮುಖಂಡನಿಗೆ ಅವಾಜ್ ಹಾಕಿದ ಬಿಜೆಪಿ ಶಾಸಕ

Webdunia
ಸೋಮವಾರ, 2 ಏಪ್ರಿಲ್ 2018 (15:55 IST)
ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ಶಾಸಕ ಎಸ್. ತಿಪ್ಪೇಸ್ವಾಮಿ ಆರ್.ಎಸ್.ಎಸ್. ಮುಂಖಂಡನಿಗೆ ಅವಾಜ್ ಹಾಕಿದ ಘಟನೆ ವರದಿಯಾಗಿದೆ.
ಬಿಜೆಪಿ ಟಿಕೇಟ್ ಆಕಾಂಕ್ಷಿ ಮೊಳಕಾಲ್ಮೂರು ಹಾಲಿ ಶಾಸಕ  ಎಸ್. ತಿಪ್ಪೇಸ್ವಾಮಿ, ಆರ್.ಎಸ್.ಎಸ್. ಮುಖಂಡ ವೇಣುಗೋಪಾಲ್‌ಗೆ ದೂರವಾಣಿ ಕರೆ ಮಾಡಿ ಮತ್ತೊಬ್ಬ ಟಿಕೆಟ್ ಆಕಾಂಕ್ಷಿ ಪ್ರಭಾಕರ್ ಮ್ಯಾಸನಾಯಕರ ಜೊತೆ ಸುತ್ತಾಡದಂತೆ ಅವಾಜ್ ಹಾಕಿದ್ದಾರೆ ಎನ್ನಲಾಗುತ್ತಿದೆ.
 
ತುಮಕೂರು ಮೂಲದ ಪ್ರಭಾಕರ್ ಮೊಳಕಾಲ್ಮೂರು ಕ್ಷೇತ್ರದ ಬಿಜೆಪಿ ಟಿಕೇಟ್ ಆಕಾಂಕ್ಷಿಯಾಗಿದ್ದು ಅವರಿಗೆ ಎಂ.ಎಲ್.ಎ ತಿಪ್ಪೇಸ್ವಾಮಿ ಅಮ್ಮ, ಅಪ್ಪ, ಸೂ...ಮಗ ಎಂದು ಅವಾಚ್ಯ ಪದ ಬಳಸಿ ಧಮ್ಕಿಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ. 
 
ನಾಯಕನಹಟ್ಟಿ ಸಂಘ ಪರಿವಾರದ ಕಾರ್ಯಕರ್ತನಾಗಿರುವ ವೇಣುಗೋಪಾಲ್ ಗೆ ದಮ್ಕಿ, ಪ್ರಭಾಕರ್ ಒಬ್ಬ ಊರು ನಾಯಕ ಸೂ..ಮಗ ಎಂದು ಅವಾಚ್ಯ ಪದ ಬಳಸಿ ನಿಂದನೆ ಮಾಡಿದ ಶಾಸಕ, ನಾಯಕರು ಅಂದರೆ ಏನು ಅರ್ಥ?ನಿನ್ನ ಸಂಘ -ಪಂಗ ಎಲ್ಲಾ ಬಿಟ್ಟುಬಿಡು ಅದೆಲ್ಲವನ್ನು ಹಚ್ಚಿಕೊಳ್ಳೋಕೆ ಹೋಗಬೇಡ ಎಂದು ಗುಡುಗಿದ್ದಾರೆ.
 
ಹಾಲಿ ಎಂ.ಎಲ್.ಎ ಇದಾರೆ ಕ್ಷೇತ್ರಕ್ಕೆ ಬರಬೇಡ ಎಂದು ಹೇಳು, ಇಲ್ಲವಾದರೆ ಅವನು ಸಿಗಲಿ ನೋಡು ಎಂದು ಬೆದರಿಕೆ ಹಾಕಿದ ತಿಪ್ಪೇಸ್ವಾಮಿ, 
ಅವನು ದುಡ್ಡು ಹೊಡೆದುಕೊಂಡು ಬಂದಿದ್ದಾನೆ, ಅವನೊಬ್ಬ ಕಳ್ಳ. ಬೇಕಿದ್ರೆ ತುಮಕೂರು ಸುರೇಶ್ ಗೌಡರನ್ನ ಕೇಳು ಅಂತ ಹೇಳು ಅವನು ದುಡ್ಡು ಹೊಡೆದುಕೊಂಡು ಬಂದವನು ಎಂದು ತಮ್ಮ ನಾಲಿಗೆ ಹರಿಬಿಟ್ಟಿದ್ದಾರೆ.
 
ಬಿಜೆಪಿ ಟಿಕೆಟ್ ಆಕಾಂಕ್ಷಿ ಗಳ ನಡುವಿನ ಮುಸುಕಿನ ಗುದ್ದಾಟ ಬಯಲಾಗಿದ್ದು, ಪಕ್ಷದೊಳಗಿನ ಭಿನ್ನಮತ ಬಿಜೆಪಿ ಪಾಲಿಗೆ ಯಾವ ಧಕ್ಕೆ ತರಲಿದೆ ಎನ್ನುವುದು ಕಾದುನೋಡಬೇಕಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಜಾರಿ ನಿರ್ದೇಶನಾಯಕ್ಕೆ ದೂರು ನೀಡಿದ್ದು ಯಾರೆಂದು ಗೊತ್ತು: ಸ್ಪಷ್ಟ ಮಾಹಿತಿಯಿದೆ ಎಂದ ಸಚಿವ ಸತೀಶ್‌ ಜಾರಕಿಹೊಳಿ

ಬ್ರಿಕ್ಸ್ ಶೃಂಗಸಭೆ ವೇಳೆ ಪ್ರಧಾನಿ ಮೋದಿ ಆಯೋಜಿಸಿದ್ದ ಗೌರವ ಭೋಜನಕೂಟಕ್ಕೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಗೈರು

ಜಾವಾ ಸಮುದ್ರದಲ್ಲಿ 241 ಪ್ರಯಾಣಿಕರಿದ್ದ ಹಡಗು ಸಂಪರ್ಕ ಕಡಿತ: ಹೆಲಿಕಾಪ್ಟರ್‌ ಮೂಲಕ ಹುಡುಕಾಟ

ಆತ್ಮಹತ್ಯೆ ಮಾಡಿಕೊಳ್ಳಲು ಕಾಲುವೆಗೆ ಹಾರಿದ ಮಹಿಳೆಯನ್ನು ಹೀರೋಗಳಂತೆ ಕಾಪಾಡಿದ ಯುವಕರು, Video

ಮಸೀದಿ ರಸ್ತೆಯಲ್ಲಿ ಮೆರವಣಿಗೆ ಹೋಗಬಾರದು ಎಂದ ಪೊಲೀಸರಿಗೆ ಚಾಲೆಂಜ್ ಮಾಡಿದ ಪ್ರತಾಪ್ ಸಿಂಹ ಪೇಟೆ ರೌಡಿ ಎಂದ ಪ್ರಿಯಾಂಕ್ ಖರ್ಗೆ

ಮುಂದಿನ ಸುದ್ದಿ
Show comments