Publish Date: Mon, 02 Apr 2018 (15:55 IST)
Updated Date: Mon, 02 Apr 2018 (15:57 IST)
ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ಶಾಸಕ ಎಸ್. ತಿಪ್ಪೇಸ್ವಾಮಿ ಆರ್.ಎಸ್.ಎಸ್. ಮುಂಖಂಡನಿಗೆ ಅವಾಜ್ ಹಾಕಿದ ಘಟನೆ ವರದಿಯಾಗಿದೆ.
ಬಿಜೆಪಿ ಟಿಕೇಟ್ ಆಕಾಂಕ್ಷಿ ಮೊಳಕಾಲ್ಮೂರು ಹಾಲಿ ಶಾಸಕ ಎಸ್. ತಿಪ್ಪೇಸ್ವಾಮಿ, ಆರ್.ಎಸ್.ಎಸ್. ಮುಖಂಡ ವೇಣುಗೋಪಾಲ್‌ಗೆ ದೂರವಾಣಿ ಕರೆ ಮಾಡಿ ಮತ್ತೊಬ್ಬ ಟಿಕೆಟ್ ಆಕಾಂಕ್ಷಿ ಪ್ರಭಾಕರ್ ಮ್ಯಾಸನಾಯಕರ ಜೊತೆ ಸುತ್ತಾಡದಂತೆ ಅವಾಜ್ ಹಾಕಿದ್ದಾರೆ ಎನ್ನಲಾಗುತ್ತಿದೆ.
ತುಮಕೂರು ಮೂಲದ ಪ್ರಭಾಕರ್ ಮೊಳಕಾಲ್ಮೂರು ಕ್ಷೇತ್ರದ ಬಿಜೆಪಿ ಟಿಕೇಟ್ ಆಕಾಂಕ್ಷಿಯಾಗಿದ್ದು ಅವರಿಗೆ ಎಂ.ಎಲ್.ಎ ತಿಪ್ಪೇಸ್ವಾಮಿ ಅಮ್ಮ, ಅಪ್ಪ, ಸೂ...ಮಗ ಎಂದು ಅವಾಚ್ಯ ಪದ ಬಳಸಿ ಧಮ್ಕಿಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನಾಯಕನಹಟ್ಟಿ ಸಂಘ ಪರಿವಾರದ ಕಾರ್ಯಕರ್ತನಾಗಿರುವ ವೇಣುಗೋಪಾಲ್ ಗೆ ದಮ್ಕಿ, ಪ್ರಭಾಕರ್ ಒಬ್ಬ ಊರು ನಾಯಕ ಸೂ..ಮಗ ಎಂದು ಅವಾಚ್ಯ ಪದ ಬಳಸಿ ನಿಂದನೆ ಮಾಡಿದ ಶಾಸಕ, ನಾಯಕರು ಅಂದರೆ ಏನು ಅರ್ಥ?ನಿನ್ನ ಸಂಘ -ಪಂಗ ಎಲ್ಲಾ ಬಿಟ್ಟುಬಿಡು ಅದೆಲ್ಲವನ್ನು ಹಚ್ಚಿಕೊಳ್ಳೋಕೆ ಹೋಗಬೇಡ ಎಂದು ಗುಡುಗಿದ್ದಾರೆ.
ಹಾಲಿ ಎಂ.ಎಲ್.ಎ ಇದಾರೆ ಕ್ಷೇತ್ರಕ್ಕೆ ಬರಬೇಡ ಎಂದು ಹೇಳು, ಇಲ್ಲವಾದರೆ ಅವನು ಸಿಗಲಿ ನೋಡು ಎಂದು ಬೆದರಿಕೆ ಹಾಕಿದ ತಿಪ್ಪೇಸ್ವಾಮಿ,
ಅವನು ದುಡ್ಡು ಹೊಡೆದುಕೊಂಡು ಬಂದಿದ್ದಾನೆ, ಅವನೊಬ್ಬ ಕಳ್ಳ. ಬೇಕಿದ್ರೆ ತುಮಕೂರು ಸುರೇಶ್ ಗೌಡರನ್ನ ಕೇಳು ಅಂತ ಹೇಳು ಅವನು ದುಡ್ಡು ಹೊಡೆದುಕೊಂಡು ಬಂದವನು ಎಂದು ತಮ್ಮ ನಾಲಿಗೆ ಹರಿಬಿಟ್ಟಿದ್ದಾರೆ.
ಬಿಜೆಪಿ ಟಿಕೆಟ್ ಆಕಾಂಕ್ಷಿ ಗಳ ನಡುವಿನ ಮುಸುಕಿನ ಗುದ್ದಾಟ ಬಯಲಾಗಿದ್ದು, ಪಕ್ಷದೊಳಗಿನ ಭಿನ್ನಮತ ಬಿಜೆಪಿ ಪಾಲಿಗೆ ಯಾವ ಧಕ್ಕೆ ತರಲಿದೆ ಎನ್ನುವುದು ಕಾದುನೋಡಬೇಕಾಗಿದೆ.