Select Your Language

Notifications

webdunia
webdunia
webdunia
webdunia

ವಾಣಿಜ್ಯ ಬಳಕೆ ಸಿಲಿಂಡರ್ ಬಳಸುವ ಗ್ರಾಹಕರಿಗೆ ಬಿಗ್ ಶಾಕ್

ವಾಣಿಜ್ಯ ಬಳಕೆ ಸಿಲಿಂಡರ್ ಬಳಸುವ ಗ್ರಾಹಕರಿಗೆ ಬಿಗ್ ಶಾಕ್
ನವದೆಹಲಿ , ಶುಕ್ರವಾರ, 1 ಅಕ್ಟೋಬರ್ 2021 (15:19 IST)
ನವದೆಹಲಿ : ಪ್ರತಿ ತಿಂಗಳೂ ಅಡುಗೆ ಅನಿಲದ ಬೆಲೆ ಏರುಗತಿಯಲ್ಲಿಯೇ ಸಾಗುತ್ತಿದೆ. ಕಳೆದ ತಿಂಗಳು ಅಂದರೆ ಸೆಪ್ಟೆಂಬರ್ಗೆ ಅನ್ವಯ ಆಗುವಂತೆ ಪ್ರತಿ ತಿಂಗಳೂ 25 ರೂಪಾಯಿ ಏರಿಕೆ ಆಗುತ್ತಲೇ ಸಾಗಿತ್ತು. ಇದರ ಬೆನ್ನಲ್ಲೇ ಇದೀಗ ವಾಣಿಜ್ಯ ಬಳಕೆ ಸಿಲಿಂಡರ್ ಬಳಸುವ ಗ್ರಾಹಕರಿಗೆ ಶಾಕ್ ನೀಡಲಾಗಿದೆ.

ಅದೇನೆಂದರೆ ಅಕ್ಟೋಬರ್ 1 ರಿಂದ ಅನ್ವಯ ಆಗುವಂತೆ ವಾಣಿಜ್ಯ ಬಳಕೆ ಸಿಲಿಂಡರ್ ಅನ್ನು 43.5 ರೂಪಾಯಿಗೆ ಏರಿಸಲಾಗಿದೆ. ದೇಶದ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಯಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) 19 ಕೆಜಿ ವಾಣಿಜ್ಯ ಅನಿಲ ಸಿಲಿಂಡರ್ ಬೆಲೆಯನ್ನು ಪ್ರತಿ ಸಿಲಿಂಡರ್ ಗೆ 43.5 ರೂ.ಗಳವರೆಗೆ ಹೆಚ್ಚಿಸಿದೆ.
ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಅನಿಲ ಸಿಲಿಂಡರ್ ಬೆಲೆ 1693 ರೂ.ಗಳಿಂದ ಪ್ರತಿ ಸಿಲಿಂಡರ್ ಗೆ 1736.5 ರೂ.ಗೆ ಏರಿಕೆಯಾಗಿದೆ. ಆದರೆ ಸಂತಸದ ಸಂಗತಿಯೆಂದರೆ, ಅಡುಗೆ ಇಂಧನದ ಬೆಲೆಯಲ್ಲಿ ಸದ್ಯ ಯಾವುದೇ ಏರಿಕೆಯಾಗಿಲ್ಲ.
ಸೆಪ್ಟೆಂಬರ್ 1ರಂದು ಬೆಲೆ ಏರಿಕೆಯಾದಂತೆ ಅಡುಗೆ ಇಂಧನದ ಬೆಲೆ ಸದ್ಯ ದೆಹಲಿ: 884.50 ರೂ, ಬೆಂಗಳೂರು: 887.5 ರೂ, ಮುಂಬೈ: 884.50 ರೂ, ಕೋಲ್ಕತಾ: 911 ರೂ, ಚೆನ್ನೈ: 900.50 ರೂ ಹಾಗೂ ಹೈದರಾಬಾದ್: 937 ರೂ ಇವೆ.


Share this Story:

Follow Webdunia kannada

ಮುಂದಿನ ಸುದ್ದಿ

ಜನಸಾಮಾನ್ಯನಿಗೆ ಮತ್ತೆ ಬೆಲೆ ಏರಿಕೆಗೆ ಬರೆ