ಅಂಬರೀಷ್ ಸ್ಪರ್ಧೆಗೆ ಬಿಗ್ ಬ್ರೆಕ್: ಅಮರಾವತಿ ಚಂದ್ರಶೇಖರ್‌ಗೂ ಇಲ್ಲ ಟಿಕೆಟ್

Webdunia
ಮಂಗಳವಾರ, 24 ಏಪ್ರಿಲ್ 2018 (13:01 IST)
ಮಂಡ್ಯ: ಮಂಡ್ಯ ಟಿಕೆಟ್ ಗೊಂಲದಕ್ಕೆ‌ಬಿಗ್ ಬ್ರೇಕ್ ಬಿದ್ದಿದೆ. ಅಂಬರೀಶ್ ಸ್ಪರ್ಧೆಯಿಂದ ಅಧಿಕೃತ ಹಿಂದಕ್ಕೆ ಸರಿದಿದ್ದಾರೆ. ಅಧಿಕೃತ ಕಾಂಗ್ರೆಸ್ ಅಭ್ಯರ್ಥಿಯಾಗಿ ರವಿಗಣಿಗ ಆಯ್ಕೆಯಾಗಿದ್ದಾರೆ. ರವಿಗಣಿಗಗೆ ಬಿ-ಫಾರಂ ಕಾಂಗ್ರೆಸ್ ನೀಡಿದೆ.
ಅಮರಾವತಿ ಚಂದ್ರಶೇಖರ್ ಗೆ ತಪ್ಪಿದ ಕೈ ಟಿಕೆಟ್: 
 
ಅಂಬರೀಷ್ ವಿರುದ್ಧ ಅಮರಾವತಿ ಚಂದ್ರಶೇಖರ್ ಸಹೋದರನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಂಡ್ಯದಲ್ಲಿ ಚಂದ್ರಶೇಖರ್ ಸಹೋದರ ಅಮರಾವತಿ ನಾಗರಾಜು ಹೇಳಿಕೆ ನೀಡಿದ್ದು, ಅಂಬರೀಷ್ ಮನಸ್ಸಿನಲ್ಲಿರೋದು ನಮಗೆ ಗೊತ್ತಾಗಿಲ್ಲ. ನಾನು ಸ್ಪರ್ಧಿಸಲ್ಲ ನೀನೇ ಸ್ಪರ್ಧೆ ಮಾಡು ಅಂತ ಸ್ವತಃ ಅಂಬರೀಷ್ ಚಂದ್ರಶೇಖರ್ ಗೆ ಹೇಳಿದ್ದರು.
 
ಆ ಹಿನ್ನಲೆಯಲ್ಲಿ ನಾವು ಮಂಡ್ಯದಲ್ಲಿ ನಮಗೆ ಟಿಕೆಟ್ ಎಂದು ಹೇಳಿಕೊಂಡಿದ್ದೆವು.ಇದೀಗ ನೀನು ಸೋಲ್ತೀಯಾ ನಿನಗೆ ಟಿಕೆಟ್ ಕೊಡಲ್ಲ ಅಂತಾರೆ. ಅಂಬರೀಷ್ ಅವರ ಈ ಮಾತು ಎಷ್ಟು ಸರಿ? ಎಂದು ಪ್ರಶ್ನಿಸಿದ್ದಾರೆ. 
 
ಅಂಬರೀಷ್ ರಾಮನಗರ, ಶ್ರೀರಂಗಪಟ್ಟಣ ದಲ್ಲಿ ಸೋತಿಲ್ವಾ? ಸೋಲು ಗೆಲುವನ್ನು ಜನ ತೀರ್ಮಾನ ಮಾಡ್ತಾರೆ. ಅಂಬರೀಷ್ ಅಲ್ಲ‌. ಡಿ.ಕೆ.ಶಿವಕುಮಾರ್ ಅವರು ಅಂಬರೀಷ್ ನ ನಂಬಬೇಡಿ ಅವ್ರು ನಿಮಗೆ ಯಾವ ಸಹಾಯ ಕೂಡ ಮಾಡಲ್ಲ ಅಂದಿದ್ರು. 
ಇದೀಗ ಅಂಬರೀಷ್ ಬಗ್ಗೆ ಡಿಕೆಶಿ ಹೇಳಿದ ಮಾತೇ ನಿಜವಾಗಿದೆ.ನಮ್ಮಣ್ಣ ಅಂಬರೀಷ್ ನಂಬಿ ಹಾಳಾದ್ರು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
 
ನಮ್ಮನೆ ಹಾಳಾಗಿದೆ‌. ಮಂಡ್ಯಕ್ಕೆ ಯಾರಿಗೆ ಟಿಕೆಟ್ ಕೊಡ್ತಾರೆ ಅವ್ರಿಗೆ ಚುನಾವಣೆ ಮಾಡ್ತೇವೆ.ಅಂಬರೀಷ್ ನಮ್ಮ ಸಂಬಂಧ ಮುಗಿದಿದೆ‌. ನಮಗೂ ಅವರಿಗೂ ಯಾವುದೇ ಸಂಬಂಧವಿಲ್ಲ ಎಂದು ಅಂಬರೀಷ್ ವಿರುದ್ಧ ಅಸಮಾಧಾನಗೊಂಡು ಕಣ್ಣೀರಿಟ್ಟ ಅಮರಾವತಿ ಸಹೋದರ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಆರ್ ಎಸ್ಎಸ್ ಗೆ ದಲಿತ ಚಾಲೆಂಜ್ ಹಾಕಿದ ಪ್ರಿಯಾಂಕ್ ಖರ್ಗೆ: ನಿಮ್ಮಲ್ಲಿ ದಲಿತರನ್ನು ಸಿಎಂ ಮಾಡಿ ಎಂದ ಪಬ್ಲಿಕ್

Karnataka Weather: ಈ ಜಿಲ್ಲೆಯವರಿಗೆ ಇಂದು ಭಾರೀ ಮಳೆ

ಇದೇ 22ರಂದು ಶಬರಿಮಲೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ

ಪಿಎಸ್ಐ ಆಗಿ 10ವರ್ಷ ಪೊರೈಸಿದ ಖುಷಿಯಲ್ಲಿ ಮಾಡ್ಬರ್ದು ಮಾಡಿ ಅಮಾನತು ಆದ ಪೋಲಿಸ್ ಅಧಿಕಾರಿ

ಆತ್ಮಹತ್ಯೆಗೆ ಶರಣಾದ ಐಪಿಎಸ್ ಅಧಿಕಾರಿ ಪೂರಣ್ ಕುಮಾರ್ ಪ್ರಕರಣಕ್ಕೆ ಹೊಸ ಟ್ವಿಸ್ಟ್‌

ಮುಂದಿನ ಸುದ್ದಿ
Show comments