Publish Date: Sun, 22 Apr 2018 (08:56 IST)
Updated Date: Sun, 22 Apr 2018 (08:58 IST)
ಮೈಸೂರು: ಮಂಡ್ಯ ಕ್ಷೇತ್ರದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಕೊಟ್ಟರೂ ಸ್ಪರ್ಧಿಸಲು ಷರತ್ತು ಹಾಕುತ್ತಿರುವ ರೆಬಲ್ ಸ್ಟಾರ್ ಅಂಬರೀಷ್ ವಿರುದ್ಧ ಸಿಎಂ ಸಿದ್ದರಾಮಯ್ಯಗೆ ಅಸಮಾಧಾನ ಉಂಟಾಗಿದೆ.
ನಿನ್ನೆಯಷ್ಟೇ ಅಂಬರೀಷ್ ಜತೆ ಮಾತುಕತೆ ನಡೆಸಲ್ಲ. ಸ್ಪರ್ಧಿಸುವುದು ಅವರಿಗೆ ಬಿಟ್ಟ ವಿಚಾರ ಎಂದಿದ್ದ ಸಿಎಂ ಇಂದು ಅಂಬರೀಷ್ ಮನ ಒಲಿಸುವ ಕೆಲಸ ಮಾಡಲ್ಲ ಎಂದಿದ್ದಾರೆ.
ಸಂಪುಟದಿಂದ ಕೈ ಬಿಟ್ಟಿದ್ದಕ್ಕೆ ಅಂಬರೀಷ್ ಅಸಮಾಧಾನಗೊಂಡಿದ್ದರು. ಇದೇ ಕಾರಣಕ್ಕೆ ಇದೀಗ ಚುನಾವಣೆಗೆ ಸ್ಪರ್ಧಿಸಲು ಮಂಡ್ಯ ಉಸ್ತುವಾರಿ ಸ್ಥಾನ ಕೊಡಬೇಕು ಎಂದು ಬೇಡಿಕೆಯಿಟ್ಟಿದ್ದಾರೆ ಎನ್ನಲಾಗಿದೆ.
ಆದರೆ ಅಂಬಿ ಜತೆ ಕಾಂಪ್ರಮೈಸ್ ಆಗುವ ಮನಸ್ಸು ಸಿಎಂಗೆ ಇಲ್ಲ. ‘ಒಂದು ವೇಳೆ ಅಂಬರೀಷ್ ಸ್ಪರ್ಧಿಸದೇ ಹೋದರೆ ಪಕ್ಷ ಬೇರೊಬ್ಬ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತದೆ. ಅವರ ಮನ ಒಲಿಸುವ ಕೆಲಸ ಮಾಡಲ್ಲ’ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟವಾಗಿ ಹೇಳಿದ್ದಾರೆ. ಇದರೊಂದಿಗೆ ಮಂಡ್ಯ ಕಾಂಗ್ರೆಸ್ ನಲ್ಲಿ ಕೋಲಾಹಲ ಸೃಷ್ಟಿಯಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.