Publish Date: Thu, 26 May 2022 (13:59 IST)
Updated Date: Thu, 26 May 2022 (15:01 IST)
ರಾಯಚೂರು : ಗುಲ್ಬರ್ಗಾ ವಿಶ್ವವಿದ್ಯಾಲಯದ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದು ಇಂದು ನಡೆಯಬೇಕಿದ್ದ ವಾಣಿಜ್ಯ ಶಾಸ್ತ್ರದ 5ನೇ ಸೆಮಿಸ್ಟರ್ನ ಪರೀಕ್ಷೆ ರದ್ದಾಗಿದೆ.
ಪ್ರಶ್ನೆ ಪತ್ರಿಕೆ ಸೋರಿಕೆ ವಿವಿ ರಿಜಿಸ್ಟ್ರಾರ್ ಡಾ.ಮೇಧಾವಿನಿ ಕಟ್ಟಿ ಅವರು, ಇಂದು ಮಧ್ಯಾಹ್ನ 2 ಗಂಟೆಗೆ ನಡೆಯಬೇಕಿದ್ದ ಮ್ಯಾನೆಜ್ಮೆಂಟ್ ಅಕೌಂಟಿಂಗ್ ವಿಷಯದ ಪರೀಕ್ಷೆ ಪ್ರಶ್ನೆ ಪತ್ರಿಕೆ ಬೆಳಗ್ಗೆಯೇ ಸೋರಿಕೆಯಾಗಿದೆ.
ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆ ಸೈಬರ್ ಪೊಲೀಸ್ ಠಾಣೆಗೆ ದೂರು ಕೊಡಲು ವಿವಿ ಮುಂದಾಗಿದೆ. ಪರೀಕ್ಷೆ ರದ್ದುಗೊಳಿಸಿ ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದ್ದಾರೆ.
ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಬಗ್ಗೆ ಆರೋಪಗಳಿದ್ದು, ಬೀದರ್ನ ಲ್ಲೂ ಪತ್ರಿಕೆ ಸೋರಿಕೆಯಾಗಿರುವ ಬಗ್ಗೆ ಅನುಮಾನಗಳಿವೆ.