Select Your Language

Notifications

webdunia
webdunia
webdunia
webdunia

SSLC ಮುಖ್ಯ ಪರೀಕ್ಷೆ'ಯ 'ಮಾದರಿ ಪ್ರಶ್ನೆ ಪತ್ರಿಕೆ' ರಿಲೀಸ್

SSLC Main Examination 'Sample Question Paper' Release
ಕೊರೊನಾ ಸೋಂಕಿನ ನಡುವೆಯೂ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯನ್ನು ನಡೆಸಲು ತಾತ್ಕಾಲಿಕ ಆಯ್ಕೆಯನ್ನು ಕರ್ನಾಟಕ ಪರೀಕ್ಷಾ ಪರೀಕ್ಷಾ ಮಂಡಳಿ ಪ್ರಕಟಿಸಿದೆ.
ಇದೀಗ ಮುಖ್ಯ ಪರೀಕ್ಷೆಯ ಅಂತಿಮ ದಿನಾಂಕವನ್ನು ಪ್ರಕಟಿಸಲಾಗಿದೆ.
ಈ ಪಟ್ಟಿಯಂತೆ ಮಾರ್ಚ್ 28 ರಿಂದ ಪರೀಕ್ಷೆ ಆರಂಭಗೊಂಡು, ಏಪ್ರಿಲ್ 11 ರಂದು ಮುಕ್ತಾಯಗೊಳ್ಳಲಿದೆ. ಈ ಬಳಿಕ ಎಸ್ ಎಸ್ ಎಲ್ ಸಿ ಮುಖ್ಯ ಪರೀಕ್ಷೆಗೆ ಈಗ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಬಿಡುಗಡೆ ಮಾಡಿದೆ.
ಈ ಕುರಿತಂತೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಮಾರ್ಚ್, ಏಪ್ರಿಲ್ 2022ರ ಎಸ್ ಎಸ್ ಎಲ್ ಸಿ ಮುಖ್ಯ ಪರೀಕ್ಷೆಯ  ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಮಾರ್ಚ್ 28ರಿಂದ ಆರಂಭಗೊಂಡು ಏಪ್ರಿಲ್ 11ರಂದು ಮುಕ್ತಾಯಗೊಳ್ಳಲಿದೆ ಎಂದು ತಿಳಿಸಿದೆ. ಅಲ್ಲದೇ ಮಾದರಿ ಪ್ರಶ್ನೆ ಪತ್ರಿಕೆಗಳನ್ನು https://sslc.karnataka.gov.in/new-page/ModelQuestionPapersfor2021-22SSLCExamination/kn ಜಾಲತಾಣದಲ್ಲಿ ಪ್ರಕಟಿಸಿದೆ.
 
ಹೀಗಿದೆ ಎಸ್ ಎಸ್ ಎಲ್ ಸಿ ಮುಖ್ಯ ಪರೀಕ್ಷೆಯ ವಿಷಯವಾರು ವೇಳಾಪಟ್ಟಿ 
ದಿನಾಂಕ 28-03-2022ರ ಸೋಮವಾರ - ಪ್ರಥಮ ಭಾಷೆ - ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲೀಷ್, ಇಂಗ್ಲೀಷ್ ( ಎನ್ ಸಿ ಇ ಆರ್ ಟಿ ), ಸಂಸ್ಕೃತ.
ದಿನಾಂಕ 30-03-2022, ಬುಧವಾರ - ದ್ವಿತೀಯ ಭಾಷೆ - ಇಂಗ್ಲೀಷ್, ಕನ್ನಡ.
ದಿನಾಂಕ 01-04-2022, ಶುಕ್ರವಾರ - ಕೋರ್ ಸಬ್ಜೆಕ್ಟ್ - ಎಲಿಮೆಂಟ್ಸ್ ಆಫ್ ಮೆಕಾನಿಕಲ್ ಮತ್ತು ಎಲೆಕ್ಟ್ರಿಕಲ್ ಇಂಜಿನಿಯರಿಂಗ್-2, ಇಂಜಿನಿಯರಿಂಗ್ ಗ್ರಾಫಿಕ್ಸ್-2, ಎಲಿಮೆಂಟ್ಸ್ ಆಫ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್, ಎಲಿಮೆಂಟ್ಸ್ ಆಫ್ ಕಂಪ್ಯೂಟರ್ ಸೈನ್ಸ್, ಅರ್ಥ ಶಾಸ್ತ್ರ.
ದಿನಾಂಕ 02-04-2022 ರಂದು ಶನಿವಾರ ಯುಗಾದಿ ಹಬ್ಬ- ಪರೀಕ್ಷೆ ಇಲ್ಲ.
ದಿನಾಂಕ 03-04-2022 ರಂದು ಭಾನುವಾರ ರಜೆ.
ದಿನಾಂಕ 04-04-2022 ಸೋಮವಾರ - ಕೋರ್ ಸಬ್ಜೆಕ್ಟ್ - ಗಣಿತ, ಸಮಾಜ ಶಾಸ್ತ್ರ.
ದಿನಾಂಕ 06-04-2022, ಬುಧವಾರ - ಕೋರ್ ಸಬ್ಜೆಕ್ಟ್ - ಸಮಾಜ ವಿಜ್ಞಾನ.
ದಿನಾಂಕ 07-04-2022ರಂದು ಗುರುವಾರ ಪರೀಕ್ಷೆ ಇಲ್ಲ
ದಿನಾಂಕ 08-04-2022 ಶುಕ್ರವಾರ ತೃತೀಯ ಭಾಷೆ - ಹಿಂದಿ ( NCERT ), ಹಿಂದಿ, ಕನ್ನಡ, ಇಂಗ್ಲಿಷ್, ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ, ತುಳು.
ದಿನಾಂಕ 08-04-2022- ಶುಕ್ರವಾರ ಎನ್ ಎಸ್ ಕ್ಯೂ ಎಫ್ ಪರೀಕ್ಷಾ ವಿಷಯಗಳು - ಮಾಹಿತಿ ತಂತ್ರಜ್ಞಾನ, ರೀಟೇಲ್, ಆಟೋಮೊಬೈಲ್ಸ್, ಹೆಲ್ತ್ ಕೇರ್, ಬ್ಯೂಟಿ ಆಂಡ್ ವೆಲ್ ನೆಸ್.
ದಿನಾಂಕ 9-04-2022 ರಂದು ಶನಿವಾರ ರಜೆ, ದಿನಾಂಕ.
10-04-2022 ಭಾನುವಾರ ರಜೆ.
ದಿನಾಂಕ 11-04-2022 ಸೋಮವಾರ - ಕೋರ್ ಸಬ್ಜೆಕ್ಟ್ - ವಿಜ್ಞಾನ, ರಾಜ್ಯಶಾಸ್ತ್ರ, ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ.

Share this Story:

Follow Webdunia kannada

ಮುಂದಿನ ಸುದ್ದಿ

ಜಿಂಕೆಕೊಂಬುಗಳ ಮಾರಾಟ