ಬೆಂಗಳೂರು : ಬೆಂಗಳೂರಿನಲ್ಲಿ ಇನ್ಮುಂದೆ ರಸ್ತೆ ನಿರ್ಮಾಣ, ಡಾಂಬರೀಕರಣ, ರಸ್ತೆ ಪುನಶ್ಚೇತನ, ಕೇಬಲ್ ಅಳವಡಿಕೆ ಮಾಡುವ ಆಗಿದ್ದರೆ ಮೊದಲೇ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು.
ಕಾಮಗಾರಿ ಪೂರ್ಣಗೊಂಡ ನಂತರ ರಸ್ತೆಗಳಲ್ಲಿ ಅಗೆತ ಕಂಡು ಬಂದರೆ ಎಂಜಿನಿಯರ್ಗಳ ಸಂಬಳವನ್ನ ಕಟ್ ಮಾಡುವುದಾಗಿ ಬಿಬಿಎಂಪಿ ಯೋಜನಾ ವಿಭಾಗದ ವಿಶೇಷ ಆಯುಕ್ತರು ಖಡಕ್ ಆದೇಶ ಮಾಡಿದ್ದಾರೆ.
ತೆಗೆದಿರುವ ಗುಂಡಿ ಮುಚ್ಚಲು ಬಿಬಿಎಂಪಿಯಿಂದ ಯಾವುದೇ ಅನುದಾನ ನೀಡಲ್ಲ, ಬದಲಾಗಿ ಎಂಜಿನಿಯರ್ ಗಳು, ಕಿರಿಯ ಅಭಿಯಂತರರು ತಮ್ಮ ಸ್ವಂತ ಖರ್ಚುಗಳಿಂದನೇ ಕೆಲಸ ಮಾಡಿಸಬೇಕಾಗುತ್ತೆ. ಜೊತೆಗೆ ಎಂಜಿನಿಯರ್ಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳೊದಾಗಿ ಆದೇಶ ಮಾಡಿದ್ದಾರೆ.