Publish Date: Sun, 07 Oct 2018 (07:41 IST)
Updated Date: Sun, 07 Oct 2018 (07:43 IST)
ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಎನ್ ಡಿಎ ಕೂಟವನ್ನು ಸೋಲಿಸಲು ವಿಪಕ್ಷಗಳು ಒಂದಾಗಿ ನಡೆಸಿದ ಮಹಾಘಟಬಂಧನ್ ಒಂದು ವೈಫಲ್ಯ ಯತ್ನ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ವ್ಯಂಗ್ಯ ಮಾಡಿದ್ದಾರೆ.
ಬಿಜೆಪಿ ನೇತೃತ್ವದ ಎನ್ ಡಿಎ ಒಂದು ಪ್ರಬಲ ಸ್ಥಿರ ಸರ್ಕಾರದ ಕೂಟ. ಹೀಗಾಗಿ ಜನ ಗೊತ್ತಿದ್ದೂ ಗೊತ್ತಿದ್ದೂ ವೈಫಲ್ಯಕ್ಕೊಳಗಾದ ಪಕ್ಷಗಳಿಗೆ ಮತ ಹಾಕಿ ಆತ್ಮಹತ್ಯೆ ಮಾಡಿಕೊಳ್ಳಲ್ಲ ಎಂದು ಜೇಟ್ಲಿ ಲೇವಡಿ ಮಾಡಿದ್ದಾರೆ.
ಅಷ್ಟೇ ಅಲ್ಲದೆ, ಮುಂಬರುವ ಲೋಕಸಭೆ ಚುನಾವಣೆ ಸ್ಥಿರ ಸರ್ಕಾರ ನೀಡುವ ಎನ್ ಡಿಎ ಕೂಟ ಮತ್ತು ಅಸ್ಥಿರ ಆಡಳಿತ ನೀಡುವ ಕೂಟದ ನಡುವಿನ ಹೋರಾಟವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.