Select Your Language

Notifications

webdunia
webdunia
webdunia
webdunia

ಸಿಲಿಂಡರ್‌ಗಳಿಗೆ ಕ್ಯೂಆರ್‌ ಕೋಡ್‌ ಅಳವಡಿಕೆ

ಸಿಲಿಂಡರ್‌ಗಳಿಗೆ ಕ್ಯೂಆರ್‌ ಕೋಡ್‌ ಅಳವಡಿಕೆ
ನವದೆಹಲಿ , ಗುರುವಾರ, 17 ನವೆಂಬರ್ 2022 (14:14 IST)
ನವದೆಹಲಿ : ದೇಶೀಯ ಎಲ್ಪಿಜಿ ಸಿಲಿಂಡರ್ಗಳಲ್ಲಿ ಶೀಘ್ರವೇ ಕ್ಯೂಆರ್ ಕೋಡ್ ಅಳವಡಿಸಲಾಗುವುದು ಎಂದು ಕೇಂದ್ರ ಪೆಟ್ರೋಲ್ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ.

ಕಡಿಮೆ ಗ್ಯಾಸ್ ತುಂಬಿಸಿ ಸಿಲಿಂಡರ್ ವಿತರಿಸಿ ಗ್ರಾಹಕರಿಗೆ ಮೋಸ ಮಾಡುವವರನ್ನು ಸುಲಭವಾಗಿ ಪತ್ತೆಹಚ್ಚಲು ಈ ವ್ಯವಸ್ಥೆ ಸಹಕಾರಿಯಾಗಲಿದೆ. ಕೋಡ್-ಆಧಾರಿತ ಟ್ರ್ಯಾಕ್ ಮತ್ತು ಟ್ರೇಸ್ ಉಪಕ್ರಮವು ಕಳ್ಳತನದ ಸಮಸ್ಯೆ ಪರಿಹರಿಸಲು ಪೂರಕವಾಗಿದೆ.

ಅಲ್ಲದೇ ಸಿಲಿಂಡರ್ಗಳ ಉತ್ತಮ ದಾಸ್ತಾನು ನಿರ್ವಹಣೆ ಪತ್ತೆ ಮತ್ತು ಖಚಿತಪಡಿಸಿಕೊಳ್ಳಲು ಉತ್ತೇಜನ ನೀಡುತ್ತದೆ.

ಈ ಕ್ಯೂಆರ್ ಕೋಡ್ ಅನ್ನು ಸಿಲಿಂಡರ್ಗಳ ಮೇಲೆ ಅಂಟಿಸಲಾಗುತ್ತದೆ. ಇದು ಗ್ಯಾಸ್ ಸಿಲಿಂಡರ್ಗಳ ಕಳ್ಳತನ, ಟ್ರ್ಯಾಕಿಂಗ್ ಮತ್ತು ಟ್ರೇಸಿಂಗ್ ಮಾಡುತ್ತದೆ. ಜೊತೆಗೆ ಉತ್ತಮ ದಾಸ್ತಾನು ನಿರ್ವಹಣೆ ಸರಿಯಾಗಿ ಆಗುತ್ತಿಯೇ ಎಂಬುದನ್ನು ಖಚಿತಪಡಿಸುತ್ತದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಖ್ಯಾತ ಎಂಪೈರ್ ಹೋಟೇಲ್ ಮ್ಯಾನೇಜರ್ ಮೇಲೆ ಎಫ್ ಐ ಆರ್