Select Your Language

Notifications

webdunia
webdunia
webdunia
webdunia

ಮತ್ತೊಂದು ಓಮಿಕ್ರಾನ್ ಉಪತಳಿ ಪತ್ತೆ : WHO

ಮತ್ತೊಂದು ಓಮಿಕ್ರಾನ್ ಉಪತಳಿ ಪತ್ತೆ : WHO
ನವದೆಹಲಿ , ಶುಕ್ರವಾರ, 8 ಜುಲೈ 2022 (07:04 IST)
ನವದೆಹಲಿ : ಭಾರತ ಸೇರಿದಂತೆ 10ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಕೊರೊನಾ ಓಮಿಕ್ರಾನ್ನ ಮತ್ತೊಂದು ಉಪತಳಿ ಪತ್ತೆಯಾಗಿದೆ.

ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ನಿಗಾ ವಹಿಸಿದೆ ಎಂದು WHO ಪ್ರಧಾನ ನಿರ್ದೇಶಕ ಟೆಡ್ರೋಸ್ ಅಧಾನೊಮ್ ಘೆಬ್ರೆಯೆಸಸ್ ಹೇಳಿದ್ದಾರೆ.

ಕಳೆದ 2 ವಾರಗಳಲ್ಲಿ ಜಾಗತಿಕ ಮಟ್ಟದಲ್ಲಿ ಕೋವಿಡ್-19 ಪ್ರಕರಣಗಳು ಶೇ.30 ರಷ್ಟು ಏರಿಕೆ ಕಂಡಿವೆ. ಯುರೋಪ್ ಹಾಗೂ ಅಮೆರಿಕದಂತಹ ದೇಶಗಳಲ್ಲಿ BA -4 ಹಾಗೂ BA -5 ತಳಿಗಳ ಸೋಂಕಿನ ಅಲೆಗಳಿದ್ದು, ಭಾರತ ಸೇರಿದಂತೆ 10ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಹೊಸ ತಳಿ ಃಂ-2.75 ಪತ್ತೆಯಾಗಿರುವುದಾಗಿ ಅವರಿಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. 

ಹೊಸ ಉಪತಗಳಿಗಳಲ್ಲಿ ಕೆಲವು ಮಾರ್ಪಾಡುಗಳಾಗಿದ್ದು, ಅದೇನೆಂಬುದನ್ನು ಗಮನಿಸಬೇಕಿದೆ. ಈ ಉಪತಳಿಯು ಮಾನವನ ರೋಗನಿರೋಧಕ ಶಕ್ತಿಯನ್ನೂ ಮೀರಿ ಸೋಂಕು ಹರಡುತ್ತದೆಯೇ? ಎನ್ನುವ ಬಗ್ಗೆ ಈಗಲೇ ಹೇಳಲು ಸಾಧ್ಯವಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್ ಮಾಹಿತಿ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

3 ದಿನ ಗುಡುಗು, ಮಿಂಚು ಸಹಿತ ಮಳೆ