ವಾಷಿಂಗ್ಟನ್ : 2014ರಲ್ಲಿ ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ 2020ರಲ್ಲಿ ಜಗತ್ತು ಸಾಂಕ್ರಾಮಿಕ ರೋಗಕ್ಕೆ ತುತ್ತಾಗುತ್ತದೆ ಎಂದು ಭವಿಷ್ಯ ನುಡಿದಿದ್ದರು.
ಅವರ ಭವಿಷ್ಯ ನಿಜವೆಂಬಂತೆ ಕೋವಿಡ್-19 ಜಗತ್ತಿನಾದ್ಯಂತ ಹರಡಿತು. ಇದೀಗ ಬಿಲ್ ಗೇಟ್ಸ್ ಇನ್ನೊಂದು ಸಾಂಕ್ರಾಮಿಕ ರೋಗದ ಬಗ್ಗೆ ಭವಿಷ್ಯ ನುಡಿದಿದ್ದಾರೆ.
ಬಿಲ್ ಗೇಟ್ಸ್ ವಿಶೇಷ ಸಂದರ್ಶನವೊಂದರಲ್ಲಿ, ಜಗತ್ತು ಮುಂದಿನ 20 ವರ್ಷಗಳಲ್ಲಿ ಇನ್ನೊಂದು ಸಾಂಕ್ರಾಮಿಕ ರೋಗಕ್ಕೆ ತುತ್ತಾಗಲಿದೆ ಎಂದಿದ್ದಾರೆ. 20 ವರ್ಷಗಳ ಬಳಿಕ ತಲೆದೋರಲಿರುವ ರೋಗವನ್ನು ಜಗತ್ತು ಎದುರಿಸಲು ಈಗಲೇ ತಯಾರಿ ನಡೆಸಲು ಕರೆ ನೀಡಿದ್ದಾರೆ.
20 ವರ್ಷಗಳಲ್ಲಿ ನಾವು ಇನ್ನೊಂದು ಸಾಂಕ್ರಾಮಿಕ ರೋಗವನ್ನು ಎದುರಿಸುವ ಸಾಧ್ಯತೆ ಇದೆ. ಇದನ್ನು ಹತೋಟಿಗೆ ತರಲು ನಾವು ಸಿದ್ಧರಾಗಿರಬೇಕು.