ನವದೆಹಲಿ : ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿನ ಗಾಳಿಯ ಗುಣಮಟ್ಟ ಅಪಾಯಕಾರಿ ಮಟ್ಟ ತಲುಪಿದ ಹಿನ್ನೆಲೆ ಈ ವಿಷಯವು ಸುಪ್ರೀಂ ಕೋರ್ಟ್ ಗೆ ತಲುಪಿದ್ದು, ಮುಖ್ಯ ನ್ಯಾಯಮೂರ್ತಿ ಯು.ಯು ಲಲಿತ್ ನೇತೃತ್ವದ ಪೀಠವು ನವೆಂಬರ್ 10 ರಂದು ವಿಚಾರಣೆಗೆ ಪಟ್ಟಿಮಾಡಿದೆ.
ಈ ಬಗ್ಗೆ ಇಂದು ಕೋರ್ಟ್ ಗಮನಕ್ಕೆ ತಂದ ವಕೀಲರು, ಕಳೆದ ಕೆಲವು ವರ್ಷಗಳಲ್ಲಿ ಎಕ್ಯೂಐ ಮಟ್ಟಗಳು 500 ಸಮಿಪಿಸಿದೆ. ಫಿಟ್ ಇರುವ ಜನರು ಸಹ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ.
ಪಂಜಾಬ್ ನಲ್ಲಿ 22 ಪ್ರತಿಶತದಷ್ಟು ಹುಲ್ಲು ಸುಡುವಿಕೆಯಿಂದಾಗಿ ಪರಿಸ್ಥಿತಿ ಹದಗೆಟ್ಟಿದೆ. ಇದು ಜನರ ಬದುಕುವ ಹಕ್ಕನ್ನು ಒಳಗೊಂಡಿರುವುದರಿಂದ ಇಂದು ಅಥವಾ ನಾಳೆ ಅದನ್ನು ಆಲಿಸುವಂತೆ ನಾವು ಸುಪ್ರೀಂ ಕೋರ್ಟ್ಗೆ ವಿನಂತಿಸುತ್ತೇವೆ ಎಂದರು.