Select Your Language

Notifications

webdunia
webdunia
webdunia
webdunia

ಭಾರತೀಯರಿಗೆ ಏರ್ ಇಂಡಿಯಾ ನೆರವು

ಭಾರತೀಯರಿಗೆ ಏರ್ ಇಂಡಿಯಾ ನೆರವು
ನವದೆಹಲಿ , ಶನಿವಾರ, 19 ಫೆಬ್ರವರಿ 2022 (11:18 IST)
ನವದೆಹಲಿ : ರಷ್ಯಾ-ಉಕ್ರೇನ್ ನಡುವೆ ಯುದ್ಧದ ಕಾರ್ಮೋಡ ಆವರಿಸುತ್ತಿದ್ದಂತೆ, ಉಕ್ರೇನ್ನಲ್ಲಿರುವ ಭಾರತೀಯರು ಭಾರತಕ್ಕೆ ಬರಲು ಏರ್ ಇಂಡಿಯಾದ ಮೂರು ವಿಮಾನಗಳು ನೆರವಾಗಲು ಮುಂದಾಗಿದೆ.

ಉಕ್ರೇನ್ನಲ್ಲಿರುವ ಭಾರತೀಯರು ದೇಶಕ್ಕೆ ಮರಳುವಂತೆ ವಿದೇಶಾಂಗ ಇಲಾಖೆ ಸೂಚನೆ ನೀಡಿದ್ದು, ವಿದ್ಯಾರ್ಥಿಗಳು ಆದ್ಯತೆ ಮೇರೆಗೆ ದೇಶ ತೊರೆಯುವಂತೆ ಉಕ್ರೇನ್ನ ರಾಜಧಾನಿ ಕೀವ್ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೆ ಕೆಲ ದಿನಗಳ ಹಿಂದೆ ಮಾಹಿತಿ ರವಾನಿಸತ್ತು.

ಈ ಬೆನ್ನಲ್ಲೇ ಏರ್ ಇಂಡಿಯಾ ಮೂರು ವಿಮಾನಗಳ ಹಾರಾಟಕ್ಕೆ ನಿರ್ಧರಿಸಿದ್ದು ಇದೀಗ ಅಧಿಕೃತ ವೆಬ್ಸೈಟ್ನಲ್ಲಿ ಬುಕ್ಕಿಂಗ್ ಕೂಡ ಆರಂಭಗೊಂಡಿದೆ.

 
ಇತ್ತ ರಷ್ಯಾ ಉಕ್ರೇನ್ ಗಡಿ ವಿವಾದ ತಾರಕಕ್ಕೇರಿದ್ದು ಎರಡು ಕಡೆಯ ಸೇನೆಗಳು ಜಮಾವಣೆಗೊಂಡಿವೆ. ರಷ್ಯಾ ಹೆಚ್ಚು ಸೈನಿಕರನ್ನು ನಿಯೋಜನೆ ಮಾಡಿದ್ದು ಯುದ್ಧಕ್ಕೆ ಸನ್ನದ್ಧವಾಗಿದೆ ಎಂದು ಉಕ್ರೇನ್ ಆರೋಪಿಸಿದೆ. ಆದರೆ ಈ ಆರೋಪವನ್ನು ರಷ್ಯಾ ನಿರಾಕರಿಸಿದೆ.

ಈ ನಡುವೆ ರಷ್ಯಾ-ಉಕ್ರೇನ್ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಭಾರತವೂ ಸೇರಿದಂತೆ ಇತರ ರಾಷ್ಟ್ರಗಳು ಮುಂದಾಬೇಕು ಎಂದು ಅಮೆರಿಕಾ ಅಭಿಪ್ರಾಯಪಟ್ಟಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಹಿಜಬ್ ವಿವಾದ ಜೀವಂತವಾಗಿರಿಸಲು ಪ್ರಯತ್ನಿಸುತ್ತಾರೆ : ನಾಗೇಶ್