Select Your Language

Notifications

webdunia
webdunia
webdunia
webdunia

ಏರ್ ಇಂಡಿಯಾದ ಸಾಲಕ್ಕೆ ಹೆಚ್ಚುವರಿ ಬಜೆಟ್!

ಸರ್ಕಾರ
ಏರ್ ಇಂಡಿಯಾದ ಬಂಡವಾಳ ಹಿಂತೆಗೆತ ಪ್ರಕ್ರಿಯೆ ಈಚೆಗಷ್ಟೇ ಯಶಸ್ವಿಯಾಗಿ ಮುಗಿದಿದೆ.
 
ಇದೇ ವೇಳೆ ಸರ್ಕಾರ ಕೂಡ ಸ್ಪೆಷಲ್ ಪರ್ಪಸ್ ವೆಹಿಕಲ್ (ಎಸ್ಪಿವಿ)ಗೆ ವರ್ಗಾವಣೆಯಾದ ಸಾಲವನ್ನು ಚುಕ್ತಾ ಮಾಡಲು ನಿರ್ಧರಿಸಿದೆ. ಸರ್ಕಾರವು ಏರ್ ಇಂಡಿಯಾದ ಬಾಕಿ ಖಾತ್ರಿ ಸಾಲಗಳು ಮತ್ತು ಇತರ ಸಣ್ಣ-ಪುಟ್ಟ ಸಾಲಗಳನ್ನು ತೀರಿಸುವ ಸಲುವಾಗಿ ಹೆಚ್ಚುವರಿಯಾಗಿ 51,971 ಕೋಟಿ ರೂಪಾಯಿಗಳನ್ನು ಕೇಂದ್ರ ಬಜೆಟ್ 2022-23ರಲ್ಲಿ ಮೀಸಲಿರಿಸಿದೆ.

ಈ ಮೊತ್ತವು 2021-22ನೇ ಸಾಲಿನ ಪರಿಷ್ಕೃತ ಅಂದಾಜಿನ ಒಟ್ಟಾರೆ ವೆಚ್ಚದಲ್ಲಿ ಬರುತ್ತದೆ. “ಒಟ್ಟಾರೆ ವೆಚ್ಚವಾದ 34.83 ಲಕ್ಷ ಕೋಟಿ ರೂಪಾಯಿಯನ್ನು 2021-22ಕ್ಕೆ ಅಂದಾಜಿಸಲಾಗಿದ್ದು, ಆ ನಂತರ 37.70 ಕೋಟಿ ರೂಪಾಯಿ ಪರಿಷ್ಕೃತ ಅಂದಾಜು ಮಾಡಲಾಯಿತು.

ಪರಿಷ್ಕೃತ ಬಂಡವಾಳ ವೆಚ್ಚ 6.03 ಲಕ್ಷ ಕೋಟಿ ರೂಪಾಯಿ. ಇದರಲ್ಲಿ 51,971 ಕೋಟಿ ರೂಪಾಯಿ ಮೊತ್ತ ಏರ್ ಇಂಡಿಯಾದ ಬಾಕಿ ಇರುವ ಖಾತ್ರಿ ಸಾಲ ಹಾಗೂ ಸಣ್ಣ-ಪುಟ್ಟ ಸಾಲಗಳೂ ಸೇರಿವೆ,” ಎಂದು ಬಜೆಟ್ ಭಾಷಣದ ವೇಳೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ ಎಂದು ಈ ಬಗ್ಗೆ “ಇಂಡಿಯನ್ ಎಕ್ಸ್ಪ್ರೆಸ್” ವರದಿ ಮಾಡಿದೆ.

 

Share this Story:

Follow Webdunia kannada

ಮುಂದಿನ ಸುದ್ದಿ

ದೀರ್ಘಾವಧಿ ಆರ್ಥಿಕ ಅಭಿವೃದ್ಧಿಯ ಗುರಿಯನ್ನು ಹೊಂದಿದ ಬಜೆಟ್: ಬಿ.ಎಸ್.ಯಡಿಯೂರಪ್ಪ