Daily Horoscope
✕

ಬಿಜೆಪಿ ಅಭ್ಯರ್ಥಿ ಎಂ.ವಿ ನಾಗರಾಜು ಪರವಾಗಿ ಮತಯಾಚಿಸಿದ ನಟ ಯಶ್

Webdunia
ಗುರುವಾರ, 10 ಮೇ 2018 (14:05 IST)
ಬೆಂಗಳೂರು : ಸ್ಯಾಂಡಲ್ ವುಡ್ ನಟ ರಾಕಿಂಗ್ ಸ್ಟಾರ್ ಯಶ್ ಅವರು ನೆಲಮಂಗಲ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ.ವಿ ನಾಗರಾಜು ಅವರ ಪರವಾಗಿ  ರೋಡ್ ಶೋ ಮಾಡುವ ಮೂಲಕ ಮತಯಾಚನೆ ಮಾಡಿದ್ದಾರೆ.


ಈ ವೇಳೆ ಮಾತನಾಡಿದ ನಟ ಯಶ್, ‘ನೆಲಮಂಗಲ ತಾಲೂಕಿನಲ್ಲಿರುವ 56 ಕೆರೆಗಳನ್ನು ಹೂಳೆತ್ತಿ ಅಭಿವೃದ್ಧಿ ಮಾಡಿ ಮತ್ತೆ ಕೆರೆಗಳನ್ನು ತುಂಬಿಸುತ್ತೇನೆ ಎಂಬ ಉತ್ಸಾಹದಲ್ಲಿ ಮಾಜಿ ಶಾಸಕ ನಾಗರಾಜು ಅವರಿದ್ದಾರೆ. ಹೀಗಾಗಿ ನಾನು ನಾಗರಾಜ್ ಪರ ಮತಯಾಚನೆ ಮಾಡಲು ಬಂದಿದ್ದೇನೆ. ಒಂದು ವೇಳೆ ನಾಗರಾಜ್ ಗೆದ್ದ ಮೇಲೆ ಕೆರೆಗಳನ್ನು ಅಭಿವೃದ್ಧಿ ಮಾಡದೇ ಇದ್ದರೆ, ನಾನೇ ಖುದ್ದು ಜನರ ಮಧ್ಯೆ ಕೂತು ಪ್ರತಿಭಟನೆ ಮಾಡುತ್ತೇನೆ’ ಎಂದು ಭರವಸೆ ನೀಡಿದ್ದಾರೆ.


ಹಾಗೇ ‘ಎಂಎಲ್‍ಎ, ಎಂಪಿ ಮಿನಿಸ್ಟರ್ ಆಗಬೇಕಾದರೆ ನಾನು ತಲೆಕೆಡಿಸಿಕೊಳ್ಳಬೇಕಿಲ್ಲ. ಕರ್ನಾಟಕ ಯಾವುದೇ ಕ್ಷೇತ್ರದಲ್ಲಿ ನಾನು ಸ್ಪರ್ಧೆ ಮಾಡಿದರೂ ಚುನಾವಣೆಯಲ್ಲಿ ಜನ ನನ್ನನ್ನು ಗೆಲ್ಲಿಸುತ್ತಾರೆ. ಜನರು ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸುವಷ್ಟು ಅಭಿಮಾನ ಇಟ್ಟಿದ್ದಾರೆ. ಈ ಅಭಿಮಾನವೇ ಚುನಾವಣೆಯಲ್ಲಿ ಗೆಲ್ಲಿಸುತ್ತೆ’ ಎಂದು ಪರೋಕ್ಷವಾಗಿ ರಾಜಕೀಯಕ್ಕೆ ಬರುವ ಹಂಬಲವನ್ನು ವ್ಯಕ್ತಪಡಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Karnataka Weather : ವಿವಿಧ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ ಹೇಗಿದೆ, ಇಲ್ಲಿದೆ ವಿವರ

ಏನಿದು ಸ್ಟಾರ್ಲಿಂಕ್, ಎಲಾನ್ ಮಸ್ಕ್ ಸ್ಟಾರ್ಲಿಂಕ್ ಭಾರತದ ಭದ್ರತೆ ಎಷ್ಟು ಅಪಾಯಕಾರಿ, ಗಮನಿಸಿ

ವಿಮಾನದಲ್ಲಿ ಅಭಿಜಿತ್ ದಿಪ್ಕೆ ವಶಕ್ಕೆ ಪಡೆಯುವಾಗ ದೇಶದಿಂದ ಹೊರಗೆ ಹಾಕಿ ಎಂದು ಕೂಗಿದ ಸಹಪ್ರಯಾಣಿಕರು: Video

ದಲಿತರ ಸಮಸ್ಯೆ ಕಡೆ ರಾಜ್ಯ ಗೃಹ ಸಚಿವರು ಗಮನ ಹರಿಸಲಿ: ಛಲವಾದಿ ನಾರಾಯಣಸ್ವಾಮಿ

ಅತಿಯಾದ ಆಲೋಚನೆಯಿಂದ ಮುಕ್ತಿ ಪಡೆಯುವುದು ಹೇಗೆ: ಗುರು ಶ್ರೀ ಶ್ರೀ ರವಿ ಶಂಕರ್ ನೀಡಿದ ಸರಳ ಸೂತ್ರಗಳು

ಮುಂದಿನ ಸುದ್ದಿ
Show comments