Publish Date: Fri, 20 Apr 2018 (10:08 IST)
Updated Date: Fri, 20 Apr 2018 (15:22 IST)
ಬೆಂಗಳೂರು: ಕೆಪಿಜೆಪಿ ಪಕ್ಷದ ಕಹಿ ಅನುಭವದ ನಂತರ ತಮ್ಮದೇ ಪಕ್ಷ ಸ್ಥಾಪಿಸುವುದಾಗಿ ಘೋಷಿಸಿ ಹಲವಾರು ದಿನಗಳೇ ಕಳೆದರೂ ನಟ ಉಪೇಂದ್ರ ಯಾವುದೇ ಹೊಸ ಸುದ್ದಿ ಕೊಟ್ಟಿಲ್ಲ. ಹಾಗಿದ್ದರೆ ಮುಂಬರುವ ಚುನಾವಣೆಯಲ್ಲಿ ಉಪೇಂದ್ರ ಸ್ಪರ್ಧೆ ಇಲ್ಲವೇ?
ಮೇ 12 ರಂದು ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಉಪೇಂದ್ರ ಮತ್ತು ಅವರ ಪ್ರಜಾಕೀಯ ಪಕ್ಷದ ಯಾರೂ ಸ್ಪರ್ಧಿಸಲ್ಲ ಎಂಬ ಸುದ್ದಿ ಮೂಲಗಳಿಂದ ತಿಳಿದುಬಂದಿದೆ.
ಉಪೇಂದ್ರ ಹೊಸ ಪಕ್ಷ ಸ್ಥಾಪನೆ ವಿಚಾರ ಇನ್ನೂ ಆರಂಭದ ಹಂತದಲ್ಲಿದೆಯಷ್ಟೆ. ಈಗಾಗಲೇ ಚುನಾವಣಾ ಆಯೋಗವನ್ನು ಸಂಪರ್ಕಿಸಿರುವ ಉಪೇಂದ್ರ ಹೊಸ ಪಕ್ಷದ ಚಿಹ್ನೆ ಹೆಸರಿನ ಬಗ್ಗೆ ಚರ್ಚೆ ನಡೆಸಿದ್ದಾರಷ್ಟೆ.
ಮುಂದಿನ ತಿಂಗಳಿನಿಂದ ಪಕ್ಷ ಸ್ಥಾಪನೆ, ಸಂಘಟನೆ ಬಗ್ಗೆ ಯೋಜನೆ ರೂಪಿಸಲಿದ್ದೇನೆ. ಮುಂದಿನ ವರ್ಷದ ಚುನಾವಣೆಗೆ ತಯಾರಿ ನಡೆಸಲಿದ್ದೇನೆ ಎಂದು ಉಪೇಂದ್ರ ಹೇಳಿಕೊಂಡಿದ್ದಾರೆ. ಆ ಮೂಲಕ ನೇರವಾಗಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಸುಳಿವು ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.