Publish Date: Fri, 20 Apr 2018 (08:17 IST)
Updated Date: Fri, 20 Apr 2018 (15:33 IST)
ಶಿವಮೊಗ್ಗ: ಮುಂಬರುವ ವಿಧಾನಸಭೆ ಚುನಾವಣೆಗೆ ಮೊದಲು ಟಿಕೆಟ್ ಭರವಸೆಯಿತ್ತು ನಂತರ ತನ್ನ ವಿರೋಧಿ ಹರತಾಳು ಹಾಲಪ್ಪಗೆ ಸಾಗರ ಕ್ಷೇತ್ರದ ಟಿಕೆಟ್ ನೀಡಿದ್ದಕ್ಕೆ ಬೇಳೂರು ಗೋಪಾಲಕೃಷ್ಣ ಕೆಂಡಾಮಂಡಲರಾಗಿದ್ದಾರೆ.
ಟಿಕೆಟ್ ವಂಚಿತರಾದ ಸುದ್ದಿ ತಿಳಿದ ಮೇಲೆ ಯಡಿಯೂರಪ್ಪ ಮೇಲೆ ಗುಡುಗಿದ್ದ ಬೇಳೂರು, ಅನಂತ ಕುಮಾರ್ ಮತ್ತು ಕೆಎಸ್ ಈಶ್ವರಪ್ಪ ಮಾತ್ರ ನನ್ನ ನಾಯಕರು ಎಂದು ಖಡಕ್ ಆಗಿ ಹೇಳಿದ್ದರು.
ಇದೀಗ ಮತ್ತೆ ಬಿಎಸ್ ವೈ ಆಪ್ತೆ ಶೋಭಾ ಕರಂದ್ಲಾಜೆ ವಿರುದ್ಧವೂ ವಾಗ್ದಾಳಿ ನಡೆಸಿರುವ ಬಿಜೆಪಿ ನಾಯಕ ಬೇಳೂರು ‘ಶೋಭಾ ಕರಂದ್ಲಾಜೆ ಮನೆ ಮೇಲೆ ಐಟಿ ದಾಳಿ ನಡೆಸಬೇಕು. ಐಟಿ ದಾಳಿ ನಡೆದರೆ ಅವರ ಮನೆಯಲ್ಲಿ ಕೋಟಿ ಕೋಟಿ ಹಣ ಸಿಗಬಹುದು’ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಇದು ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗುವ ನಿರೀಕ್ಷೆಯಿದೆ. ಈ ಮೊದಲು ಯಡಿಯೂರಪ್ಪ ಬೇಳೂರುಗೆ ಟಿಕೆಟ್ ನೀಡುವುದಾಗಿ ಭರವಸೆ ನೀಡಿದ್ದರು ಎನ್ನಲಾಗಿತ್ತು. ಆದರೆ ಹರತಾಳು ಹಾಲಪ್ಪ ಪಕ್ಷ ಬಿಟ್ಟು ಹೋಗುವ ಬೆದರಿಕೆ ಹಾಕಿದ್ದರಿಂದ ಬೇಳೂರು ಬದಲಿಗೆ ಸಾಗರ ಟಿಕೆಟ್ ಹಾಲಪ್ಪ ಪಾಲಾಗಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.