Webdunia - Bharat's app for daily news and videos

Install App

ಮೈಸೂರಿನಲ್ಲಿ ಚುರುಕುಗೊಂಡ ಚುನಾವಣಾ ಭದ್ರತಾ ಕಾರ್ಯ

Webdunia
ಮಂಗಳವಾರ, 3 ಏಪ್ರಿಲ್ 2018 (13:19 IST)
ಜಿಲ್ಲಾಧಿಕಾರಿಗಳಿಂದ ಉತ್ತಮ ರೀತಿಯ ಮತದಾನಕ್ಕೆ ಸಕಲ ಸಿದ್ಧತೆ ಮಾಡಲಾಗುತ್ತಿದ್ದು ಒಟ್ಟು ಜಿಲ್ಲೆಯಾದ್ಯಂತ ಗಡಿ ಭಾಗಗಳಲ್ಲಿ 49 ಚೆಕ್ ಪೋಸ್ಟ್ ಗಳನ್ನು ತೆರೆಯಲಾಗಿದೆ. 93 ಚುನಾವಣಾ ಸಂಚಾರಿ ತಪಾಸದಳಗಳನ್ನು ರಚನೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಜಿಲ್ಲೆಯಾದ್ಯಂತ 7 ಅಬಕಾರಿ ಚೆಕ್ ಪೋಸ್ಟ್ ಗಳನ್ನು ತೆರೆಯಲಾಗಿದೆ. ಅಹಿತಕರ ಘಟನೆಗಳು ನಡೆಯದಂತೆ ನೋಡಿಕೋಳ್ಳಲು 209 ವಲಯಾಧಿಕಾರಿಗಳ ನೇಮಕ ಮಾಡಲಾಗಿದೆ. ಇದುವರೆಗೂ ನೀತಿ ಸಂಹಿತೆ ಉಲ್ಲಂಘನೆಯಡಿ ನಾಲ್ಕು ಕೇಸ್ ದಾಖಲಿಸಲಾಗಿದೆ ಎನ್ನಲಾಗಿದೆ.
 
ಕಳೆದ 30 ರಂದು ಹತ್ಯೆಯಾದ ರಾಜು ಮನೆಗೆ ಅಮಿತ್ ಶಾ ಭೇಟಿ ನೀಡಿ 5 ಲಕ್ಷ ಪರಿಹಾರ ನೀಡಿರುವ ಆರೋಪದ ಹಿನ್ನೆಲೆಯಲ್ಲಿ  ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ವಿರುದ್ಧ ನೀತಿಸಂಹಿತೆಯಡಿ ದೂರು ದಾಖಲಾಗಿದೆ ಎಂದು ಚುನಾವಣೆ ಆಯೋಗದ ಮೂಲಗಳು ತಿಳಿಸಿವೆ.
 
ಉಳಿದಂತೆ ಅನುಮತಿಯಿಲ್ಲದೆ ಹೆಚ್ಚಿನ ವಾಹನಗಳ ಬಳಕೆ, ಸರ್ಕಾರಿ ಕಾಮಗಾರಿಗೆ ಚಾಲನೆಗೆ ಸಂಬಂಧಪಟ್ಟಂತೆ 4 ಕೇಸ್ ದಾಖಲಾಗಿದ್ದು ಮಾದರಿ ನೀತಿಸಂಹಿತೆ ಉಲ್ಲಂಘನೆಯಡಿ 144 ದಾಳಿ ಪ್ರಕರಣಗಳು ದಾಖಲಾಗಿವೆ.
 
ಈ ಪ್ರಕರಣಗಳಲ್ಲಿ 29 ಮಂದಿ ಬಂಧಿಸಲಾಗಿದೆ. ಹೆಚ್ ಡಿ ಕೋಟೆ ಚೆಕ್ ಪೋಸ್ಟ್ ನಲ್ಲಿ ಒಂದು ಕೆಜಿ ಚಿನ್ನಾಭರಣಗಳು ಜಪ್ತಿ ಮಾಡಲಾಗಿದೆ
ಒಟ್ಟು 19 ಪ್ರಕರಣಗಳು ಈಗಾಗಲೇ ಇತ್ಯರ್ಥಪಡಿಸಲಾಗಿದೆ. ಇದುವರೆಗೂ ಚಾಮುಂಡೇಶ್ವರಿ, ವರುಣ, ಹುಣಸೂರು, ಹೆಚ್ ಕೋಟೆಯಲ್ಲಿ ನಾಲ್ಕು ಕಡೆ ನೀತಿಸಂಹಿತೆ ಉಲ್ಲಂಘನೆ ಕೇಸ್ ದಾಖಲಾಗಿವೆ.
 
ಯಾವುದೇ ರೀತಿಯ ಚುನಾವಣಾ ಬಗ್ಗೆ ಪರವಾನಗಿ ಪಡೆಯಲು ಪ್ರತೀ ತಾಲೂಕಿನಲ್ಲೂ ಸಿಂಗಲ್ ವಿಂಡೋ ಕಚೇರಿ ತೆರೆಯಲಾಗಿದೆ
 
ಸೋಶಿಯಲ್ ಮೀಡಿಯಾಗಳ ಮೇಲೂ ಅಧಿಕಾರಿಗಳು ಕಣ್ಷಿಟ್ಟಿದ್ದಾರೆ. ಯಾವುದೇ ಮಾಧ್ಯಮಗಳಲ್ಲಿ ಜಾಹಿರಾತು ಕೊಡಲು ಸಂಬಂದಪಟ್ಟವರಿಂದ ಪರವಾನಗಿ ಪಡೆಯಬೇಕು ಎಂದು ತಿಳಿಸಿದ್ದಾರೆ. 
 
ಇದುವರೆಗೂ ಯಾವುದೇ ರೀತಿಯ ಚುನಾವಾಣ ಅತಿಕ್ರಮಗಳು ಸದ್ಯ ಕಂಡುಬಂದಿಲ್ಲ ಎಂದು ಜಿಲ್ಲಾ ಕಚೇರಿಯಲ್ಲಿ ಮೈಸೂರು ಡಿಸಿ ಶಿವಕುಮಾರ್ ಕೆ ಬಿ ಸುದ್ದಿಗೋಷ್ಠಿ ನಡೆಸಿ ಹೇಳಿಕೆ ನೀಡಿದ್ದಾರೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments