Select Your Language

Notifications

webdunia
webdunia
webdunia
webdunia

ದೇಶದಲ್ಲಿ ಗರ್ಭಪಾತ ಮಿತಿ ಹೆಚ್ಚಳ ಕಾನೂನು ಜಾರಿ

ದೇಶದಲ್ಲಿ ಗರ್ಭಪಾತ ಮಿತಿ ಹೆಚ್ಚಳ ಕಾನೂನು ಜಾರಿ
ನವದೆಹಲಿ , ಶನಿವಾರ, 25 ಸೆಪ್ಟಂಬರ್ 2021 (14:57 IST)
ನವದೆಹಲಿ, ಸೆ 25 : ದೇಶದಲ್ಲಿ ಗರ್ಭಿಣಿಗೆ ಗರ್ಭಪಾತಕ್ಕೆ ಅನುಮತಿ ನೀಡುವ ಮಿತಿಯನ್ನು ಪ್ರಸ್ತುತ 20 ವಾರಗಳಿಂದ 24 ವಾರಗಳಿಗೆ ಹೆಚ್ಚಿಸಲು ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ.

ಕಳೆದ ವರ್ಷ ಈ ಸಂಬಂಧ ಕೇಂದ್ರ ಸಂಪುಟ ಸಭೆಯಲ್ಲಿ ತೀರ್ಮಾನವಾಗಿತ್ತು, ಆ ಬಳಿಕ ಲೋಕಸಭೆ ಹಾಗೂ ರಾಜ್ಯಸಭೆ ಅನುಮತಿ ಪಡೆದು, ಕಾಯ್ದೆ ಅನುಮೋದನೆಗೆ ರಾಷ್ಟ್ರಪತಿಗೆ ಕಳುಹಿಸಲಾಗಿತ್ತು, ರಾಷ್ಟ್ರಪತಿ ಅಂಕಿತದ ಬಳಿಕ ಈಗ ಕೇಂದ್ರ ಆರೋಗ್ಯ ಇಲಾಖೆ ಸೆಪ್ಟೆಂಬರ್ 24ರಿಂದ ಗರ್ಭಧಾರಣೆಯ ವೈದ್ಯಕೀಯ ಸಮಾಪ್ತಿ ಕಾಯ್ದೆ ಜಾರಿಗೆ ಬರಲಿದೆ ಎಂದು ಅಧಿಸೂಚನೆ ಹೊರಡಿಸಿದೆ.
ಸದ್ಯ, ಭಾರತದ ಕಾನೂನು ಪ್ರಕಾರ ಗರ್ಭಿಣಿಗೆ 20 ವಾರಗಳೊಳಗೆ ಮಾತ್ರ ಗರ್ಭಪಾತ ಮಾಡಿಸಿಕೊಳ್ಳಲು ಅವಕಾಶವಿದೆ. ಇದನ್ನು 24 ವಾರಗಳಿಗೆ ಅಂದರೆ ಸುಮಾರು 6 ತಿಂಗಳಿಗೆ ಹೆಚ್ಚಳ ಮಾಡಲು ಮೋದಿ ಸರ್ಕಾರ ಮುಂದಾಗಿತ್ತು. ಗರ್ಭಧಾರಣೆಯ ವೈದ್ಯಕೀಯ ಸಮಾಪ್ತಿ ಕಾಯ್ದೆ (1971)ಗೆ ತಿದ್ದುಪಡಿ ತರಲು ಹಾಗೂ ಗರ್ಭಧಾರಣೆಯ ವೈದ್ಯಕೀಯ ಸಮಾಪ್ತಿ (ತಿದ್ದುಪಡಿ) ಮಸೂದೆ, 2020ಕ್ಕೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ.
24 ವಾರಗಳವರೆಗೆ ಮಹಿಳೆಗೆ ಗರ್ಭಪಾತಕ್ಕೆ ಅನುಮತಿ ನೀಡುತ್ತಿರುವುದರಿಂದ ಅತ್ಯಾಚಾರಕ್ಕೆ ಒಳಗಾದವರು, ವಿಕಲಾಂಗ ಬಾಲಕಿಯರು ಮತ್ತು ಅಪ್ರಾಪ್ತ ವಯಸ್ಕರಿಗೆ ಸಹಾಯವಾಗುತ್ತದೆ.
ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಕಾನೂನಿನಲ್ಲಿ ಮಾರ್ಪಾಡು ತರುತ್ತಿದೆ. ಗರ್ಭಪಾತದ ಕಾಲಾವಧಿ ಮಿತಿಯನ್ನು 24 ವಾರಗಳಿಗೆ ಹೆಚ್ಚಿಸಲು ಕೇಂದ್ರ ಸರ್ಕಾರ 1971ರ ಗರ್ಭಪಾತ ಕಾಯ್ದೆಗೆ ತಿದ್ದುಪಡಿ ತರುವ ಮಸೂದೆಗೆ ಒಪ್ಪಿಗೆ ಕೊಟ್ಟಿದೆ. ಈಗಿರುವ ಕಾಯ್ದೆ ಪ್ರಕಾರ, ಗರ್ಭಪಾತಕ್ಕೆ 20 ವಾರಗಳವರೆಗೆ ಮಿತಿ ಹಾಕಲಾಗಿದೆ. ತಿದ್ದುಪಡಿ ಕಾಯ್ದೆ ಜಾರಿಗೆ ಬಂದರೆ ಈ ಅವಧಿ 24 ವಾರಕ್ಕೆ ಏರಲಿದೆ. ಅಂದರೆ 5 ತಿಂಗಳ ಗರ್ಭಿಣಿಯರೂ ಕೂಡ ತಮ್ಮ ಹೊಟ್ಟೆಯಲ್ಲಿರುವ ಜೀವಂತ ಭ್ರೂಣವನ್ನು ತೆಗೆಸಲು ಕಾನೂನು ಅವಕಾಶ ಮಾಡಿಕೊಡಲಿದೆ.
ಈ ನೂತನ ತಿದ್ದುಪಡಿ ಕಾಯ್ದೆಯಿಂದ ಸುರಕ್ಷಿತವಾಗಿ ಗರ್ಭಪಾತ ಮಾಡುವುದಕ್ಕೆ ಯಾವುದೇ ಸಮಸ್ಯೆ ಆಗುವುದಿಲ್ಲ. ಅಲ್ಲದೇ, ಮಹಿಳೆಯರಿಗೆ ತಮ್ಮ ಗರ್ಭಧಾರಣೆ ವಿಚಾರದಲ್ಲಿ ಹೆಚ್ಚು ಹಕ್ಕು ಹೊಂದಲು ಸಾಧ್ಯವಾಗುತ್ತದೆ. 24 ವಾರಗಳವರೆಗೆ ಕಾಲಾವಧಿ ವಿಸ್ತರಿಸುವುದರಿಂದ ಅತ್ಯಾಚಾರ ಸಂತ್ರಸ್ತೆಯರು, ವಿಶೇಷ ಚೇತನದ ಮಹಿಳೆಯರು, ಅಪ್ರಾಪ್ತೆಯರಿಗೆ ಅನಗತ್ಯ ಗರ್ಭಧಾರಣೆಯನ್ನು ನೀಗಿಸಿಕೊಳ್ಳುವ ಅವಕಾಶ ಇರುತ್ತದೆ.
ಕೆಲವರಿಗೆ ಗರ್ಭಧಾರಣೆಯಾಗಿ 20 ವಾರವಾದರೂ ಗೊತ್ತಾಗದೇ ಇರುವ ಸಾಧ್ಯತೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಕಾಲಾವಧಿಯನ್ನು 4 ವಾರ ಹೆಚ್ಚಿಸಲಾಗಿದೆ. ಇದನ್ನು ವಿವಿಧ ತಜ್ಞರ ಜೊತೆ ಸಮಾಲೋಚನೆ ನಡೆಸಿ ತೀರ್ಮಾನಕ್ಕೆ ಬರಲಾಗಿದೆ. ಈ ಕಾನೂನು ತಿದ್ದುಪಡಿಯಿಂದ ಗರ್ಭಿಣಿಯರ ಸಾವಿನ ಪ್ರಮಾಣವನ್ನು ತಗ್ಗಿಸಬಹುದಾಗಿದೆ ಎಂದು ಪ್ರಕಾಶ್ ಜಾವಡೇಕರ್ ತಿಳಿಸಿದ್ದರು.
ಮಹಿಳೆಗೆ ತನ್ನ ದೈಹಿಕ ಆರೋಗ್ಯ ಕಾಪಾಡಿಕೊಳ್ಳುವ ಹಕ್ಕು ಇದೆ ಎಂದಿರುವ ಕೇಂದ್ರ ಸರ್ಕಾರ, ಗರ್ಭಪಾತ ಅವಧಿ ಹೆಚ್ಚಳ ಆಕೆಯ ಸಂತಾನೋತ್ಪತ್ತಿ ಹಕ್ಕನ್ನು ಖಾತ್ರಿಪಡಿಸುತ್ತದೆ ಎಂದು ಅಭಿಪ್ರಾಯಪಟ್ಟಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಯುಪಿಎಸ್ಸಿಯಲ್ಲಿ ಉತ್ತೀರ್ಣರದ ಅಭ್ಯರ್ಥಿಗಳಿಗೆ ಪ್ರಧಾನಿ ಮೋದಿ ಅಭಿನಂದನೆ