Webdunia - Bharat's app for daily news and videos

Install App

ರಾಜಕೀಯಕ್ಕೆ ಅಭಿಷೇಕ್ ಎಂಟ್ರಿ ಕೊಡ್ತಾರಾ?

Webdunia
ಭಾನುವಾರ, 8 ಮೇ 2022 (08:49 IST)
ಬೆಂಗಳೂರು : ಇವತ್ತಿನಿಂದ ಆಪರೇಷನ್ ಹಳೆ ಮೈಸೂರು ಚಾಪ್ಟರ್ 1 ಶುರುವಾಗಿದೆ.
 
ಅಂಬಿ ಪುತ್ರ ಅಭಿಷೇಕ್ಗೆ ಬಿಜೆಪಿ ಗಾಳ ಹಾಕಿದ್ದು, ಮತ್ತೆ ಅಂಬಿ ಫ್ಯಾಮಿಲಿ ಮಂಡ್ಯ ಅಖಾಡಕ್ಕೆ ಇಳಿದರೆ ರಣಕಣ ಗ್ಯಾರಂಟಿ. ಹಾಗಾದರೆ ಸುಮಲತಾ ನಡೆ ಏನು? ಪುತ್ರನನ್ನ ರಾಜಕೀಯಕ್ಕೆ ಎಂಟ್ರಿ ಕೊಡಿಸ್ತಾರಾ ಎಂಬ ಕುತೂಹಲ ಇದೆ.

ಮಂಡ್ಯದಲ್ಲಿ ಯುವ ನಾಯಕತ್ವ ಬರುತ್ತೆ ಎಂದು ಸಿಎಂ ಸುಳಿವು ಕೊಟ್ಟ ಬೆನ್ನಲ್ಲೇ ಸಕ್ಕರೆ ನಗರಿಯಲ್ಲೀಗ ಅಂಬಿ ನೆನಪು. ಅಂಬರೀಷ್ ಚುನಾವಣೆ ಅಖಾಡದಲ್ಲಿ ಇರ್ತಾರೆ ಅಂದರೆ ಅದರ ಖದರ್ ಬೇರೆಯೇ ಇರುತ್ತಿತ್ತು. ಅಂಬಿ ಮಂಡ್ಯದ ಗಂಡಾಗಿ ರಾಜಕೀಯದಲ್ಲಿ ಹಲವು ಏಳುಬೀಳುಗಳನ್ನು ಸಹ ಕಂಡಿದ್ದರು.

ಇದೀಗ ಅಂಬರೀಷ್ ಫ್ಯಾಮಿಲಿಯನ್ನೇ ಬಿಜೆಪಿ ಕರೆತರಲು ನಾನಾ ರೀತಿಯ ತಂತ್ರಗಾರಿಕೆ ಶುರುವಾಗಿದೆ. ಅಭಿಷೇಕ್ ಕೂಡ ರಾಜಕೀಯಕ್ಕೆ ಎಂಟ್ರಿ ಮಾಡಿಸಲು ಬಿಜೆಪಿಯಿಂದ ಮಹಾ ಪ್ಲ್ಯಾನ್ ನಡೆದಿದೆ. ಮಂಡ್ಯದಲ್ಲಿ ಯುವ ನಾಯಕತ್ವ ಬರಲಿದೆ ಎಂದು ಸಿಎಂ ಹೇಳಿರುವುದರ ಹಿಂದೆ ಅಂಬರೀಷ್ ಅವರ ಮಗ ರಾಜಕೀಯ ಎಂಟ್ರಿ ಇದೆಯಾ ಎಂಬ ಕುತೂಹಲ ಮನೆ ಮಾಡಿದೆ.

 
ಒಟ್ಟಿನಲ್ಲಿ ಅಂಬಿ ಅಡ್ಡಾದಿಂದಲೇ ಆಪರೇಷನ್ ಓಲ್ಡ್ ಮೈಸೂರು ಶುರುವಾಗಿದ್ದು, ಇವತ್ತು ಮಂಡ್ಯದಿಂದ ಬಿಜೆಪಿಗೆ ಹಲವರು ಸೇರ್ಪಡೆಯಾಗಿದ್ದು, ಮುಂದೆ ಎರಡನೇ ಹಂತದಲ್ಲಿ ಅಭಿಷೇಕ್ ರಾಜಕೀಯ ಎಂಟ್ರಿಯ ಭವಿಷ್ಯ ನಿರ್ಧಾರವಾಗುವ ಸಾಧ್ಯತೆ ಇದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments