Select Your Language

Notifications

webdunia
webdunia
webdunia
webdunia

ಶೀಘ್ರವೇ ಬರಲಿದೆ ಚಾಲಕನಿಲ್ಲದೇ ಚಲಿಸೋ ರೈಲು

ಶೀಘ್ರವೇ ಬರಲಿದೆ ಚಾಲಕನಿಲ್ಲದೇ ಚಲಿಸೋ ರೈಲು
ನವದೆಹಲಿ , ಸೋಮವಾರ, 14 ನವೆಂಬರ್ 2022 (07:22 IST)
ನವದೆಹಲಿ : ಭಾರತದಲ್ಲಿ ಮೊದಲ ಬಾರಿಗೆ ಮಾನವರಹಿತ ಚಾಲಿತ ರೈಲು ಶೀಘ್ರವೇ ಸಂಚಾರ ಆರಂಭಿಸಲಿದೆ.

ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಮತ್ತು ದೆಹಲಿ ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ ಒಪ್ಪಂದಕ್ಕೆ ಸಹಿ ಹಾಕಿದ್ದು, ಮೆಟ್ರೋ ಮತ್ತು ರೈಲುಗಳ ಮಾನವರಹಿತ ಕಾರ್ಯಾಚರಣೆ ಸಕ್ರಿಯಗೊಳ್ಳಲಿದೆ.

ಮೆಟ್ರೋ ಮತ್ತು ರೈಲು ಆಟೊಮೇಷನ್ ಕ್ಷೇತ್ರದಲ್ಲಿ ದೊಡ್ಡ ಪ್ರಗತಿಯಾಗಿದೆ. ಭಾರತ ಸರ್ಕಾರದ ‘ಆತ್ಮನಿರ್ಭರ್ ಭಾರತ್’ ಮಿಷನ್ಗೆ ಉತ್ತೇಜನ ನೀಡಲಿದೆ. ಈ ಯೋಜನೆಯನ್ನು ಭಾರತ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ಕೈಗೊಳ್ಳಲಾಗುತ್ತಿದೆ.

ದೇಶದ ಪ್ರಮುಖ ಸಾರಿಗೆ ಸಂಸ್ಥೆಯಾದ ಭಾರತೀಯ ರೈಲ್ವೆಯು ಏಷ್ಯಾದಲ್ಲಿ ಅತಿದೊಡ್ಡ ರೈಲು ಜಾಲವಾಗಿದೆ. ನಿರ್ವಹಣೆಯಲ್ಲಿ ವಿಶ್ವದಲ್ಲೇ ಎರಡನೇ ಸ್ಥಾನ ಪಡೆದಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಮೆಕಾಲೆಯ ಶಿಕ್ಷಣ ಪದ್ಧತಿ ಗುಲಾಮಗಿರಿಗೆ ದೂಡಿತ್ತು: ನಾಗೇಶ್