Select Your Language

Notifications

webdunia
webdunia
webdunia
webdunia

ಮೆಕಾಲೆಯ ಶಿಕ್ಷಣ ಪದ್ಧತಿ ಗುಲಾಮಗಿರಿಗೆ ದೂಡಿತ್ತು: ನಾಗೇಶ್

ಮೆಕಾಲೆಯ ಶಿಕ್ಷಣ ಪದ್ಧತಿ ಗುಲಾಮಗಿರಿಗೆ ದೂಡಿತ್ತು: ನಾಗೇಶ್
ಗದಗ , ಸೋಮವಾರ, 14 ನವೆಂಬರ್ 2022 (06:16 IST)
ಗದಗ : ಮೆಕಾಲೆ ಶಿಕ್ಷಣ ಪದ್ಧತಿಯು ನಮ್ಮನ್ನು ಗುಲಾಮಗಿರಿಗೆ ದೂಡಿತ್ತು. ಅದರಿಂದ ಹೊರಬರಲು ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯೊಂದೇ ಮಾರ್ಗ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದ್ದಾರೆ.

ನಗರದ ವಿದ್ಯಾದಾನ ಸಮಿತಿ ಶಾಲಾ ಶತಮಾನೋತ್ಸವ ಸಮಾರಂಭದ ಕಾರ್ಯಕ್ರಮದ ಭಾಷಣದಲ್ಲಿ ಮಾತನಾಡಿದ ಅವರು,

ಗುಲಾಮಗಿರಿ ಶಿಕ್ಷಣ ಪದ್ಧತಿಯಿಂದ ಹೊರ ಬರಲು ಎನ್ಇಪಿ ಅಗತ್ಯವಿದೆ. ಮೆಕಾಲೆ ಶಿಕ್ಷಣ ಪದ್ಧತಿ ಗುಲಾಮಗಿರಿಗೆ ದೂಡಿತ್ತು ಎಂದರು.

ವಿದ್ಯಾರ್ಥಿ ತಾನು ಬಯಸಿದ್ದನ್ನು ಕಲಿಯುವ ಪದ್ಧತಿಯೇ ಎನ್ಇಪಿ ಪದ್ಧತಿ. ಮೆಕಾಲೆ ಶಿಕ್ಷಣದಿಂದ ಎಲ್ಲರನ್ನು ಒಂದು ಮಾಡುತ್ತೇವೆ ಎಂದು ಹೊರಟ ಬ್ರಿಟಿಷರು ಮೆಕಾಲೆ ಶಿಕ್ಷಣ ಪದ್ಧತಿಯಿಂದ ಗುಲಾಮಗಿರಿಗೆ ದೂಡಿದರು. ಆದರೆ ವ್ಯಕ್ತಿಯನ್ನು ಗುಲಾಮಗಿರಿಯಿಂದ ಹೊರತರಲು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಶ್ರಮಿಸಿದೆ.

ಪ್ರತಿ ವ್ಯಕ್ತಿಯಲ್ಲಿ ವ್ಯಕ್ತಿತ್ವ ರೂಪುಗೊಳ್ಳಲು ಎನ್ಇಪಿ ಬೇಕು. ಅದಕ್ಕಾಗಿ ಪ್ರಧಾನಿ ಮೋದಿ ಅವರ ಆಶಯದಂತೆ ಈ ವರ್ಷ ಎನ್ಇಪಿ ಜಾರಿ ಬಂದಿದೆ ಎಂದು ತಿಳಿಸಿದರು. 


Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ ಇನ್ನೂ 5 ದಿನ ಮಳೆಯಾಗುವ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ