Select Your Language

Notifications

webdunia
webdunia
webdunia
webdunia

ಕೆಮ್ಮಿನ ಸಿರಪ್‌ನಿಂದ ಗ್ಯಾಂಬಿಯಾದ 66 ಮಕ್ಕಳ ಸಾವು : WHO ಎಚ್ಚರಿಕೆ

ಕೆಮ್ಮಿನ ಸಿರಪ್‌ನಿಂದ ಗ್ಯಾಂಬಿಯಾದ 66 ಮಕ್ಕಳ ಸಾವು : WHO ಎಚ್ಚರಿಕೆ
ನವದೆಹಲಿ , ಗುರುವಾರ, 6 ಅಕ್ಟೋಬರ್ 2022 (07:39 IST)
ನವದೆಹಲಿ: ಭಾರತದಲ್ಲಿ ಮೇಡನ್ ಫಾರ್ಮಾಸ್ಯುಟಿಕಲ್ಸ್ ತಯಾರಿಸಿದ 4 ಕೆಮ್ಮು ಹಾಗೂ ಶೀತದ ಸಿರಪ್ಗಳ ಕುರಿತು ವಿಶ್ವ ಆರೋಗ್ಯ ಸಂಸ್ಥೆ  ಬುಧವಾರ ಎಚ್ಚರಿಕೆ ನೀಡಿದೆ.

ಈ ಸಿರಪ್ಗಳು ಆಫ್ರಿಕಾ ಖಂಡದ ಗ್ಯಾಂಬಿಯಾದಲ್ಲಿ 66 ಮಕ್ಕಳ ಸಾವಿಗೆ ಸಂಬಂಧಪಟ್ಟಿವೆ ಎಂದು ತಿಳಿಸಿದೆ.

ಈ ಸಿರಪ್ಗಳ ಮಾದರಿಗಳನ್ನು ಸಂಗ್ರಹಿಸಿ ಈಗಾಗಲೇ ಪ್ರಯೋಗಾಲಯಗಳಲ್ಲಿ ಪರೀಕ್ಷೆಯನ್ನು ನಡೆಸಲಾಗಿದೆ. ಅವುಗಳ ವಿಶ್ಲೇಷಣೆಯಲ್ಲಿ ಹಾನಿಕಾರಕ ಅಂಶಗಳು ಒಳಗೊಂಡಿರುವುದು ಕಂಡುಬಂದಿರುವುದಾಗಿ ತಿಳಿಸಿದೆ.

4 ಉತ್ಪನ್ನಗಳ ಮಾದರಿಗಳನ್ನು ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಿದಾಗ ಅವು ಸ್ವೀಕಾರಾರ್ಹವಲ್ಲದ ಪ್ರಮಾಣದಲ್ಲಿ ಡೈಥಿಲೀನ್ ಗ್ಲೈಕೋಲ್ ಹಾಗೂ ಎಥಿಲೀನ್ ಗ್ಲೈಕೋಲ್ ಅನ್ನು ಮಾಲಿನ್ಯಕಾರಕಗಳಾಗಿ ಬಳಸಲಾಗಿದೆ ಎಂಬುದು ಖಚಿತವಾಗಿದೆ ಎಂದು ಡಬ್ಲ್ಯುಹೆಚ್ಒ ಎಚ್ಚರಿಕೆಯಲ್ಲಿ ತಿಳಿಸಿದೆ. 

 

Share this Story:

Follow Webdunia kannada

ಮುಂದಿನ ಸುದ್ದಿ

ಮಾಲೀಕನಂತೆ ಕುಟುಂತ ಸಾಗುವ ಶ್ವಾನ