Select Your Language

Notifications

webdunia
webdunia
webdunia
webdunia

ಮಾಲೀಕನಂತೆ ಕುಟುಂತ ಸಾಗುವ ಶ್ವಾನ

A dog that runs like its owner
bangalore , ಬುಧವಾರ, 5 ಅಕ್ಟೋಬರ್ 2022 (20:50 IST)
ನಾಯಿ ತನ್ನ ಪೋಷಕನನ್ನು ಅನುಕರಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಇದರರ್ಥ ಸಾಕುಪ್ರಾಣಿಗಳು ಅತ್ಯಂತ ಸೂಕ್ಷ್ಮ ಮತ್ತು ಸಂವೇದನಾಶೀಲವುಳ್ಳವು. ತನ್ನ ಪೋಷಕರ ಮನಸ್ಥಿತಿಯನ್ನು, ಪರಿಸ್ಥಿತಿಯನ್ನು ಎಲ್ಲರಿಗಿಂತ ಬಲುಬೇಗನೆ ಅರ್ಥ ಮಾಡಿಕೊಂಡು ಸ್ಪಂದಿಸುವ ಸ್ನೇಹಪೂರ್ಣ ಜೀವಿಗಳು. ಉದ್ಯಮಿ ಹರ್ಷ ಗೋಯೆಂಕಾ ಹಂಚಿಕೊಂಡಿರುವ ಈ ವಿಡಿಯೋದಲ್ಲಿ ಪೋಷಕನ ಕಾಲು ಫ್ರ್ಯಾಕ್ಚರ್ ಆಗಿ ಕುಂಟುವ ಪರಿಸ್ಥಿತಿ ಬಂದಿದೆ. ಆದರೂ ನಾಯಿಯನ್ನು ವಾಕಿಂಗ್ ಕರೆದುಕೊಂಡು ಹೋಗಿದ್ದಾನೆ. ನಾಯಿಯೂ ಕೂಡ ಇವನಿಗೆ ಕುಂಟುತ್ತ ಸಾಥ್​ ಕೊಡುತ್ತಿದೆ. ಈ ವಿಡಿಯೋ 9 ಮಿಲಿಯನ್​ ವೀಕ್ಷಕರನ್ನು ತಲುಪಿದೆ. ಅನೇಕರ ಮನಗೆದ್ದಿರುವ ಈ ವಿಡಿಯೋ ಬಗ್ಗೆ ಸಾಕಷ್ಟು ಜನರು ವಿವಿಧ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ. ಎಂಥ ಮುದ್ದಾದ ದೃಶ್ಯವಿದು. ಸಾಕುಪ್ರಾಣಿಗಳು ಅದರಲ್ಲೂ ನಾಯಿಗಳು ಬಹಳ ನಿಷ್ಠಾವಂತ ಪ್ರಾಣಿಗಳು. ತಮಗಿಂತಲೂ ಹೆಚ್ಚು ತಮ್ಮನ್ನು ಸಾಕಿದವರನ್ನು ಪ್ರೀತಿಸುತ್ತವೆ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ತನ್ನ ಪೋಷಕರಿಗೆ ಸಹಾನುಭೂತಿ ತೋರಿಸುವ ಇಂಥ ಬಗೆಯನ್ನು ಎಲ್ಲಿಯೂ ನೋಡಿರಲಿಲ್ಲ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಏಕಾಏಕಿ ವಿಮಾನ ನೆಲಕ್ಕುರುಳಿ 3 ಸಾವು