ನಾಡಿನಾದ್ಯಂತ ದಸರಾ ಹಬ್ಬದ ಸಂಭ್ರಮ ಒಂದು ಕಡೆಯಾದ್ರೆ ,ಮತ್ತೊಂದು ಕಡೆ ಗೊರಗುಂಟೆಪಾಳ್ಯದ ಕಂಠೀರವ ಸ್ಟುಡಿಯೋದಲ್ಲಿ ಸಾಗರವೇ ಹರಿದುಬರುತ್ತಿದೆ.ಈಗ ದಸರಾ ರಜೆಯಲ್ಲಿ ಹೆಚ್ಚಿನ ಅಭಿಮಾನಿಗಳು ಅಪ್ಪು ಸಮಾಧಿ ನೋಡಲು ದೌಡಾಯಿಸುತ್ತಿದ್ದಾರೆ.ಕಾಲಿಡಲಾಗದ ಜನಸಾಗರವೇ ಅಪ್ಪು ಜನರ ಸಮಾಧಿ ಬಳಿ ಬರುತ್ತಿದೆ.ನಿತ್ಯ ಸಾವಿರಾರು ಜನರು ಬರುತ್ತಿದ್ದಾರೆ.