Publish Date: Sat, 24 Sep 2022 (07:53 IST)
Updated Date: Sat, 24 Sep 2022 (09:55 IST)
ಮಂಗಳೂರು : ದಸರಾ ಹಿನ್ನೆಲೆಯಲ್ಲಿ ಮಂಗಳೂರು ತಾಲೂಕಿನಾದ್ಯಂತ ಹೆಚ್ಚುವರಿ ರಜೆ ನೀಡುವಂತೆ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಸೆ.28 ರಿಂದ ಅಕ್ಟೋಬರ್ 16 ರವರೆಗೂ ರಜೆ ನೀಡುವಂತೆ ಇಲಾಖೆಯ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಹೀಗಾಗಿ ಮಂಗಳೂರು ತಾಲೂಕಿನ ಎಲ್ಲಾ ಪ್ರಾಥಮಿಕ ಹಾಗೂ ಫ್ರೌಡ ಶಾಲೆಗಳಿಗೆ ಹೆಚ್ಚುವರಿ ನಾಲ್ಕು ದಿನಗಳ ಕಾಲ ರಜೆ ಘೋಷಿಲಾಗಿದೆ.
ಹೆಚ್ಚುವರಿ ರಜೆಯನ್ನು ನವೆಂಬರ್ ತಿಂಗಳ ನಾಲ್ಕು ಶನಿವಾರ ಹಾಗೂ ಎರಡು ಭಾನುವಾರ ತರಗತಿ ನಡೆಸಲು ಸೂಚನೆ ನೀಡಲಾಗಿದೆ.
ದಸರಾ ನಡೆಯಲಿರುವ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ದಸರಾಕ್ಕಾಗಿ ಎಲ್ಲಾ ರೀತಿಯ ಸಕಲ ಸಿದ್ಧತೆಗಳು ನಡೆದಿದೆ. ಒಂಬತ್ತು ದಿನಗಳ ಕಾಲ ನವದುರ್ಗೆಯರ ಆರಾಧನೆ ಹಾಗೂ ದಸರಾಕ್ಕೆ ಸೆಪ್ಟೆಂಬರ್ 26 ರಂದು ಅದ್ಧೂರಿ ಚಾಲನೆ ದೊರೆಯಲಿದೆ. ದಸರಾಕ್ಕಾಗಿ ನಡೆಯಬೇಕಾದ ಸುಣ್ಣಬಣ್ಣ ಬಳಿಯುವುದು, ವಿದ್ಯುತ್ ದೀಪಾಲಂಕಾರ ಸೇರಿದಂತೆ ಇತರ ಅಲಂಕಾರ, ಸಿದ್ಧತೆಗಳು ಪೂರ್ಣಗೊಂಡಿದೆ.