Publish Date: Fri, 23 Sep 2022 (21:19 IST)
Updated Date: Fri, 23 Sep 2022 (21:22 IST)
ಕೊಪ್ಪಳ ತಾಲೂಕಿನ ಕುಣಗೇರಿ ತಾಂಡ ನಿವಾಸಿ ಗಿರೀಶ್ ಕುರಿಯ ಬೈಕ್ ಅಪಘಾತದಲ್ಲಿ ತೀವ್ರ ಗಾಯಗೊಂಡು ಧಾರವಾಡ ಎಸ್ ಡಿ ಎಮ್ ಆಸ್ಪತ್ರೆಗೆ ಕುಟುಂಬಸ್ಥರು ಗಿರೀಶ್ ನನ್ನು ದಾಖಲು ಮಾಡಿದರು. ಚಿಕಿತ್ಸೆಗೆ ಸ್ಪಂದಿಸದ ಕಾರಣ ಮೆದುಳು ನಿಷ್ಕ್ರಿಯವಾಯಿತು. ಇದರ ಹಿನ್ನೆಲೆ ಗಿರೀಶ್ ಪತ್ನಿ ಪತಿಯ ಅಂಗಾಗವನ್ನು ದಾನ ಮಾಡಿದ್ದಾರೆ. ಪತಿಯನ್ನ ಕಳೆದುಕೊಂಡು ನೋವಿನಲ್ಲೂ ಸಹ ತನ್ನ ಪತಿಯ ಅಂಗಾಂಗ ದಾನ ಮಾಡಿ ಬೇರೆಯವರ ಬದುಕಿಗೆ ದಾರಿದೀಪವಾಗಿದಲ್ಲದೇ ಇತರರಿಗೂ ಮಾದರಿಯಾಗಿದ್ದಾರೆ.