Publish Date: Thu, 06 Apr 2023 (12:04 IST)
Updated Date: Thu, 06 Apr 2023 (12:07 IST)
ನವದೆಹಲಿ : 2023 ರ ಕರ್ನಾಟಕ ವಿದಾನಸಭಾ ಚುನಾವಣೆಗೆ ಕಾಂಗ್ರೆಸ್ನಿಂದ ಅಭ್ಯರ್ಥಿಗಳ 2 ನೇ ಪಟ್ಟಿ ರಿಲೀಸ್ ಆಗಿದೆ. 42 ಮಂದಿ ಅಭ್ಯರ್ಥಿಗಳ ಪಟ್ಟಿಯನ್ನು ಇದೀಗ ಕೈ ನಾಯಕರು ರಿಲೀಸ್ ಮಾಡಿದ್ದಾರೆ.
ತಮ್ಮ ಆಪ್ತರ ಪರವಾಗಿ ಪಟ್ಟು ಹಿಡಿದಿದ್ದ ಎರಡು ಕ್ಷೇತ್ರದಲ್ಲಿ ಡಿಕೆ ಶಿವಕುಮಾರ್ಗೆ ತೀವ್ರ ಹಿನ್ನಡೆಯಾಗಿದೆ. ತೀರ್ಥಹಳ್ಳಿಯಲ್ಲಿ ಮಂಜುನಾಥ ಗೌಡ ಪರ ಡಿಕೆಶಿ ಪಟ್ಟು ಹಿಡಿದಿದ್ದರು. ಇತ್ತ ಕಿಮ್ಮನೆ ರತ್ನಾಕರ್ ಗೆ ಟಿಕೆಟ್ ಕೊಡಿಸುವಲ್ಲಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ.
ಕಲಘಟಗಿಯಲ್ಲಿ ನಾಗರಾಜ್ ಚಬ್ಬಿಗೆ ಟಿಕೆಟ್ ಕೊಡಲು ಡಿಕೆಶಿ ಪಟ್ಟು ಹಿಡಿದಿದ್ದರು. ಆದರೆ ಸಂತೋಷ್ ಲಾಡ್ ಗೆ ಟಿಕೆಟ್ ಕೊಡಿಸುವಲ್ಲಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ. ಬೇಲೂರಿನಲ್ಲಿ ಡಿಕೆಶಿ ಕೈ ಮೇಲಾಗಿದೆ. ರುದ್ರೇಶ್ ಗೌಡ ಕುಟುಂಬ ಹಾಗೂ ಸಿದ್ದರಾಮಯ್ಯ ಬಣ ಎರಡಕ್ಕೂ ಸಡ್ಡು ಹೊಡೆದು ತಮ್ಮ ಆಪ್ತ ಮಾಜಿ ಸಚಿವ ಗಂಡಸಿ ಶಿವರಾಂ ಗೆ ಟಿಕೆಟ್ ಕೊಡಿಸುವಲ್ಲಿ ಡಿಕೆಶಿ ಯಶಸ್ವಿಯಾಗಿದ್ದಾರೆ.