Select Your Language

Notifications

webdunia
webdunia
webdunia
webdunia

ಇಂದಿನಿಂದ 2,000 ಮುಖಬೆಲೆ ನೋಟು ವಿನಿಮಯ ಪ್ರಕ್ರಿಯೆ ಆರಂಭ

ಇಂದಿನಿಂದ 2,000 ಮುಖಬೆಲೆ ನೋಟು ವಿನಿಮಯ ಪ್ರಕ್ರಿಯೆ ಆರಂಭ
ನವದೆಹಲಿ , ಮಂಗಳವಾರ, 23 ಮೇ 2023 (12:07 IST)
ನವದೆಹಲಿ : ಚಲಾವಣೆಯಿಂದ ಹಿಂಪಡೆದಿರುವ 2,000 ರೂ. ಮುಖಬೆಲೆಯ ನೋಟುಗಳನ್ನು ಮಂಗಳವಾರದಿಂದ ಬ್ಯಾಂಕುಗಳಿಗೆ ನೀಡಿ ಬದಲಾಯಿಸಿಕೊಳ್ಳಬಹುದು ಅಥವಾ ಡೆಪಾಸಿಟ್ ಮಾಡಿಕೊಳ್ಳಬಹುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದೆ.
 
ಆರ್ಬಿಐ ಚಲಾವಣೆಯಿಂದ ಹಿಂಪಡೆದಿರುವ 2,000 ರೂ. ಮುಖಬೆಲೆಯ ನೋಟುಗಳನ್ನು ಎಲ್ಲ ಬ್ಯಾಂಕ್ಗಳಲ್ಲಿ ಬದಲಾಯಿಸಿಕೊಳ್ಳಬಹುದು. ನಿಮ್ಮ ಹತ್ತಿರದ ಬ್ಯಾಂಕ್ ಶಾಖೆಯಲ್ಲಿ ನೀವು ನೋಟುಗಳನ್ನು ಬದಲಾಯಿಸಿಕೊಳ್ಳಬಹುದು. ಅದಲ್ಲದೇ ಆರ್ಬಿಐನ 19 ಪ್ರಾದೇಶಿಕ ಕಚೇರಿಗಳಲ್ಲಿ ನೀವು 2,000 ರೂ. ನೋಟುಗಳನ್ನು ಬದಲಿಸಿಕೊಳ್ಳಬಹುದು.

ನೋಟುಗಳ ವಿನಿಮಯಕ್ಕೆ ಅರ್ಜಿ ಬೇಕಿಲ್ಲ
ಸಾರ್ವಜನಿಕರು ಬ್ಯಾಂಕ್ಗಳಲ್ಲಿ 2,000 ರೂ. ಮುಖಬೆಲೆಯ ನೋಟುಗಳ ವಿನಿಮಯಕ್ಕೆ ಯಾವುದೇ ನಮೂನೆಯನ್ನು ಭರ್ತಿ ಮಾಡುವ ಅಗತ್ಯವಿಲ್ಲ. ಆರ್ಬಿಐ ಘೋಷಣೆಯ ಬಳಿಕ ರಿಕ್ವೆಸ್ಟ್ ಫಾರ್ಮ್ ಅನ್ನು ಭರ್ತಿ ಮಾಡಿ ನೋಟು ಬದಲಾವಣೆ ಮಾಡಬೇಕು ಎಂಬ ಸುದ್ದಿ ಹರಿದಾಡಿತ್ತು. ಆದರೆ ಭಾನುವಾರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಲ್ಲ ವದಂತಿಗಳಿಗೆ ಸ್ಪಷ್ಟನೆ ನೀಡಿದ್ದು, ಯಾವುದೇ ಫಾರ್ಮ್ ಅನ್ನು ಭರ್ತಿ ಮಾಡುವ ಅಗತ್ಯವಿಲ್ಲ ಎಂದಿದೆ.

ನೋಟು ಬದಲಾವಣೆಯ ಗಡುವು
ಮೇ 19ರಂದು ಆರ್ಬಿಐ 2,000 ರೂ. ಮುಖಬೆಲೆಯೆ ನೋಟುಗಳನ್ನು ಚಲಾವಣೆಯಿಂದ ಹಿಂಪಡೆದಿದೆ. ಆದರೆ ನೋಟುಗಳ ವಿನಿಮಯಕ್ಕೆ ಸಾಕಷ್ಟು ಸಮಯಾವಕಾಶವನ್ನು ಆರ್ಬಿಐ ನೀಡಿದೆ. ಮೇ 23 ರಿಂದ ಸೆಪ್ಟೆಂಬರ್ 30 ರವರೆಗೂ ನೋಟುಗಳ ವಿನಿಮಯಕ್ಕೆ ಅವಕಾಶ ನೀಡಲಾಗಿದ್ದು, ಈ 4 ತಿಂಗಳ ಗಡುವಿನಲ್ಲಿ ನೋಟುಗಳನ್ನು ಬದಲಿಸಿಕೊಳ್ಳಬಹುದು.

ಎಷ್ಟು ನೋಟು ಬದಲಿಸಿಕೊಳ್ಳಬಹುದು?
ಒಬ್ಬರು ಒಂದು ಬಾರಿ ಗರಿಷ್ಠ 2,000 ರೂ. ಮುಖಬೆಲೆಯ 10 ನೋಟುಗಳು ಅಂದರೆ 20,000 ರೂ.ಯನ್ನು ಬದಲಿಸಿಕೊಳ್ಳಬಹುದು ಎಂದು ಆರ್ಬಿಐ ಹೇಳಿದೆ. ಅದಲ್ಲದೇ ಒಬ್ಬ ವ್ಯಕ್ತಿ ಒಂದು ದಿನದಲ್ಲಿ ಎಷ್ಟು ಬಾರಿಯಾದರೂ ಸರತಿ ಸಾಲಿನಲ್ಲಿ ನಿಂತು ನೋಟುಗಳನ್ನು ಬದಲಿಸಿಕೊಳ್ಳಬಹುದು. ಆದರೆ ಒಂದು ಬಾರಿಗೆ ಗರಿಷ್ಠ 20,000 ರೂ. ಮಾತ್ರ ಬದಲಾವಣೆಗೆ ಅವಕಾಶ ನೀಡಲಾಗಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಖಾಸಗಿ ಕಂಪನಿಗಳು ಸ್ಥಳೀಯರಿಗೆ ಉದ್ಯೋಗಾವಕಾಶ ಕೊಡದಿದ್ದರೆ ಲೈಸೆನ್ಸ್ ರದ್ದು : ಪರಮೇಶ್ವರ್ ಎಚ್ಚರಿಕೆ