ಕಿರುತೆರೆಯಲ್ಲಿ ಇತ್ತೀಚೆಗೆ ಪೌರಾಣಿಕ ಧಾರಾವಾಹಿಗಳ ಭರಾಟೆ ಜೋರಾಗಿಯೆ ನಡೆದಿದಿ, ಅದರಲ್ಲಿ ಮಹಾದೇವಿ ಕೂಡ ಒಂದಾಗಿದೆ. ಶ್ರುತಿನಾಯ್ಡು ಅವರ ನಿರ್ಮಾಣದ ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ಧಾರಾವಾಹಿಗಳಲ್ಲೊಂದು ರಮೇಶ ಇಂದಿರಾ ಅವರ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಧಾರಾವಾಹಿಯ ಪ್ರಮುಖ ಘಟ್ಟವೊಂದರ ಚಿತ್ರೀಕರಣ ನಗರದ ಹೊರವಲಯದ ಕುಂಬಳಗೂಡು ಸಮೀಪದ ರಾಮಾಯಣ ಸ್ಟುಡಿಯೋದಲ್ಲಿ ನಡೆಯುತ್ತಿತ್ತು.
ಕಳೆದ ತಿಂಗಳ 15 ತಿಂಗಳ ಹಿಂದೆಯಷ್ಟೇ ಆರಂಭವಾದ ಈ ಧಾರಾವಾಹಿ ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ರಾತ್ರಿ 08.30 ಕ್ಕೆ ಪ್ರಸಾರವಾಗಲಿದೆ. ದೇವಿ ತನ್ನ ಭಕ್ತೆಯ ಮದುವೆಯನ್ನು ನವದುರ್ಗೆಯರೊಳಗೂಡಿ ಮಾಡಿಸುವ ದೃಶ್ಯವದು.
ನಾಯಕ ಹಾಗೂ ನಾಯಕಿ ಎರಡು ಕುಟುಂಬದವರ ಸಮ್ಮತಿಯಿಲ್ಲದೆ ನಡೆಯುತ್ತಿದ್ದ ಈ ಮದುವೆಯಲ್ಲಿ ನವದುರ್ಗೆಯರೆ ಪ್ರಮುಖ ಪಾತ್ರ ವಹಿಸಿದ್ದರು. ತನ್ನ ಪೋಷಕರ ವಿರೋಧದಿಂದ ಬೇಸರಗೊಂಡ ಭಕ್ತೆಯ ಮದುವೆಯನ್ನು ದೇವಿ ತಾನೇ ನಿಂತಿದ್ದು, ಮಾಡಿಸುವ ವೈಭವದ ದೃಶ್ಯದಲ್ಲಿ 9 ಜನ ದೇವಿಯರಾಗಿ ವೀಣಾ ಸುಂದರ್, ಮಾನಸ ಜೋಶಿ, ಸ್ವಾತಿ, ದಿವ್ಯಾ, ಮೊದಲಾದ ಕಲಾವಿದೆಯರು ಕಾಣಿಸಿಕೊಂಡಿದ್ದಾರೆ.
ದೇವಿಯ ಭಕ್ತೆ ಬಂಗಾರಿಯಾಗಿ ಲತಾ ಅಭಿನಯಿಸಿದ್ದಾರೆ. ಬಂಗಾರಿಯ ಮದುವೆಯ ಚಿತ್ರೀಕರಣ ವೀಕ್ಷಿಸಲು ಆಗಮಿಸಿದ್ದ ಪತ್ರಕರ್ತರೊಂದಿಗೆ ಮಾತಾನಾಡಿದ ನಿರ್ಮಾಪಕಿ ಶ್ರುತಿನಾಯ್ಡು, ಜಾಜಿ, ಬಂಗಾರಿಯ ಮದುವೆ ದೃಶ್ಯದ ಚಿತ್ರೀಕರಣ ನಡೆಯುತ್ತಿದೆ. ಒಂದು ವಾರ ಈ ವಿಶೇಷ ಕಂತುಗಳನ್ನು ಪ್ರಸಾರ ಮಾಡುತ್ತಿದ್ದೇವೆ. ಇದೇ 13 ರ ಸೋಮವಾರದಿಂದ ಈ ಕಂತುಗಳ ಪ್ರಸಾರ ಆರಂಭವಾಗಲಿದೆ.
ಈ ದೇವಲೋಕದ ಸೆಟ್‍ನಲ್ಲಿ ಮದುವೆಯ ದೃಶ್ಯದ ಚಿತ್ರೀಕರಣ ನಡೆಸುತ್ತಿದ್ದೇವೆ. ಅಲ್ಲದೇ ಈ ಕತೆಯಲ್ಲಿ ಈ ಭಾಗವೇ ಪ್ರಮುಖ ಘಟ್ಟವಾಗಿದೆ. ನವದುರ್ಗೆಯರೆಲ್ಲಾ ಸೇರಿ ಅನಾಥ ಹುಡುಗಿಗೆ ಮದುವೆ ಮಾಡಿಸುತ್ತಾರೆ. ಈಗಾಗಲೇ ಶ್ರೀರಸ್ತು ಶುಭಮಸ್ತು, ಸಾವಿತ್ರಿ, ಶುಭವಿವಾಹದಂತ ಧಾರಾವಾಹಿಗಳಲ್ಲಿ ಮದುವೆಯ ಎಪಿಸೋಡ್‍ಗಳು ಬಂದಿದ್ದರು, ಪೌರಾಣಿಕ ಕತೆಯ
ಹಿನ್ನೆಲೆಯಲ್ಲಿ ಬರುವ ಮದುವೆ ದೃಶ್ಯ ತುಂಬಾ ಅದ್ದೂರಿಯಾಗಿರುತ್ತದೆ.
ಇಲ್ಲಿ ನವದುರ್ಗೆಯರ ಶ್ಲೋಕಗಳನ್ನು ಸಹ ಬಳಸಿಕೊಳ್ಳಲಾಗಿದೆ. ಒಂಬತ್ತು ಜನ ಅಮ್ಮನವರು ಮುತ್ತೈದೆಯರ ರೂಪದಲ್ಲಿ ಬಂದು ಬಾಗಿನ ತೆಗೆದುಕೊಂಡು ಹೋಗುತ್ತಾರೆ. ಮಹಾದೇವಿಯಲ್ಲಿ ದೇವಲೋಕವನ್ನು ಸೃಷ್ಠಿಮಾಡಲಾಗಿದೆ ಎಂದರು. ಈ ಧಾರಾವಾಹಿಯ ಕಥಾಹಂದರವನ್ನು ನಿರ್ದೇಶಕ ರಮೇಶ ಇಂದಿರಾ ರವರೇ ರಚಿಸಿದ್ದಾರೆ, ಸುಜಯ್ ರಮೇಶ್ ಸೇರಿ ಚಿತ್ರಕಥೆ ಮಾಡಿದ್ದಾರೆ.
ಈ ಹಿಂದೆ ಇದೇ ರೀತಿಯ ಪೌರಾಣಿಕ ಕತೆ ಹೊಂದಿರುವ ದೇವಿ ಸಾವಿರಕ್ಕೂ ಹೆಚ್ಚು ಎಪಿಸೋಡ್‍ಗಳ ಪ್ರಸಾರ ಕಂಡಿತ್ತು. ಅದಾದ ನಂತರ ಬರುತ್ತಿರುವ ಮಹಾದೇವಿ ಕೂಡ ಜನಪ್ರಿಯತೆಯತ್ತ ಸಾಗಿದೆ. ಜೀ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪ್ರಮುಖ ಧಾರಾವಾಹಿಗಳ ಸಾಲಿಗೆ ಮಹಾದೇವಿ ಸೇರಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.