ಸಾಮಾನ್ಯವಾಗಿ ಚೆನ್ನೈ ಮತ್ತು ತಮಿಳುನಾಡಿನಲ್ಲಿ ಈಗ ಟ್ರೆಂಡಿಂಗ್ ಆಗಿರುವುದು ಮುಖ್ಯಮಂತ್ರಿ ಒ ಪನ್ನೀರ್ ಸೆಲ್ವಂ ಮತ್ತು ಮುಖ್ಯಮಂತ್ರಿ ಪದವಿ ಆಕಾಂಕ್ಷಿ ಶಶಿಕಲಾ ನಟರಾಜನ್. ಅದು ಬಿಟ್ಟರೆ ಜಲ್ಲಿಕಟ್ಟು. ಆದರೆ ಇದ್ದಕ್ಕಿದ್ದಂತೆ ಸುದೀಪ್ ಚೆನ್ನೈನಲ್ಲಿ ಟ್ರೆಂಡ್ ಆಗಿ ಅಚ್ಚರಿ ಮೂಡಿಸಿದ್ದಾರೆ.
ಇದಕ್ಕೆ ಕಾರಣವಾಗಿರುವುದು ಹೆಬ್ಬುಲಿ ಚಿತ್ರ. ಭಾರಿ ಬಜೆಟ್, ಅದ್ಭುತ ತಾಂತ್ರಿಕತೆಯೊಂದಿಗೆ ಚಿತ್ರವನ್ನು ತೆರೆಗೆ ತರಲಾಗುತ್ತಿದ್ದು, ಯಾವುದೇ ಭಾಷೆಯ ಚಿತ್ರಕ್ಕೆ ಕಮ್ಮಿ ಇಲ್ಲದಂತೆ ಇದನ್ನು ಚಿತ್ರೀಕರಿಸಲಾಗಿದೆ. ಹಾಗಾಗಿ ಈ ಚಿತ್ರದ ಬಗ್ಗೆ ಸಾಕಷ್ಟು ಕುತೂಹಲ ಪರರಾಜ್ಯಗಳಲ್ಲೂ ಇದೆ.
ಆದದ್ರೆ ಕನ್ನಡ ಚಿತ್ರಗಳು ಈ ಮಟ್ಟದಲ್ಲಿ ಪರರಾಜ್ಯಗಳಲ್ಲಿ ಟ್ರೆಂಡ್ ಆಗಿದ್ದು ವಿರಳಾತಿವಿರಳ. ಸುದೀಪ್ ಅವರು ತಮಿಳಿನ ಪುಲಿ ಚಿತ್ರದಲ್ಲಿ ಅಭಿನಯಿಸಿದ್ದರು. ಹಾಗಾಗಿ ಅವರಿಗೆ ಅಲ್ಲೂ ಅಭಿಮಾನಿ ಬಳಗ ಇದೆ. ಬಹುಶಃ ಹೆಬ್ಬುಲಿ ಟ್ವಿಟ್ಟರ್‌ನಲ್ಲಿ ಟ್ರೆಂಡ್ ಆಗಲು ಇದೂ ಕಾರಣವಾಗಿರಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.