ಸಾಕಷ್ಟು ಗ್ಯಾಪ್ ಬಳಿಕ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶಿಸಿದ್ದ ’ಇಷ್ಟಕಾಮ್ಯ’ ಚಿತ್ರ ನಿರೀಕ್ಷಿಸಿದ ಮಟ್ಟದಲ್ಲಿ ಯಶಸ್ವಿಯಾಗಲಿಲ್ಲ. ಈಗ ಮತ್ತೊಂದು ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ ನಾಗತಿಹಳ್ಳಿ. ಈ ಬಾರಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹೀರೋ ಎಂಬುದು ವಿಶೇಷ.
ಈ ಚಿತ್ರಕ್ಕೆ ಇನ್ನೂ ಶೀರ್ಷಿಕೆ ಫೈನಲ್ ಆಗಿಲ್ಲ. ಮಾರ್ಚ್‍ನಲ್ಲಿ ಚಿತ್ರ ಸೆಟ್ಟೇರಲಿದೆ ಎನ್ನುತ್ತವೆ ಮೂಲಗಳು. ಸದ್ಯಕ್ಕೆ ಶಿವರಾಜ್ ಕುಮಾರ್ ಅವರು ಲೀಡರ್ ಚಿತ್ರದ ಶೂಟಿಂಗ್‌ನಲ್ಲಿ ಬಿಜಿಯಾಗಿದ್ದು ಕಾಶ್ಮೀರದಲ್ಲಿದ್ದಾರೆ.
ಈಗಾಗಲೆ ಕಥೆಯನ್ನು ಶಿವಣ್ಣನಿಗೆ ಹೇಳಲಾಗಿದ್ದು ಇಷ್ಟಪಟ್ಟಿದ್ದಾರಂತೆ. ಚಿತ್ರದ ಬಗೆಗಿನ ಎಲ್ಲಾ ವಿವರಗಳು ಗೊತ್ತಾಗಬೇಕಾದರೆ ಮಾರ್ಚ್ ತನಕ ಕಾಯಲೇ ಬೇಕು. ಈ ಚಿತ್ರಕ್ಕಾಗಿ ಇಂಗ್ಲೆಂಡ್ ಮತ್ತು ಅಮೆರಿಕದ ತಂತ್ರಜ್ಞರನ್ನೂ ಬಳಸಿಕೊಳ್ಳಲು ನಾಗತಿಹಳ್ಳಿ ಚಂದ್ರಶೇಖರ್ ನಿರ್ಧರಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.