ಸ್ಯಾಂಡಲ್‍ವುಡ್‍ನಲ್ಲಿ ಮದುವೆ ಸೀಸನ್ ಶುರುವಾಗಿ ಬಹಳ ದಿನಗಳಾದವು. ಈಗ ಕಿರಿಕ್ ಪಾರ್ಟಿ ಖ್ಯಾತಿಯ ರಿಷಬ್ ಶೆಟ್ಟಿ ದಾಂಪತ್ಯ ಜೀವನಕ್ಕೆ ಅಡಿಯಿಡುವ ಗಳಿಗೆ ಕೂಡಿಬಂದಿದೆ. ಇದೇ ಫೆಬ್ರವರಿ 9ಕ್ಕೆ ಅವರು ಹೊಸ ಬಾಳಿನ ಹೊಸ ಜೀವನಕ್ಕೆ ಅಡಿಯಿಡುತ್ತಿದ್ದಾರೆ.
ಉಡುಪಿಯಲ್ಲಿ ರಿಷಬ್ ಮದುವೆ ನಡೆಯಲಿದ್ದು ಪ್ರಗತಿ ಅವರನ್ನು ವರಿಸಲಿದ್ದಾರೆ. ಮಧ್ಯಾಹ್ನ 12.25ಕ್ಕೆ ಮುಹೂರ್ತ ನಡೆಯಲಿದ್ದು ತುಂಬಾ ಸರಳವಾಗಿ ಮದುವೆ ಮಾಡಿಕೊಳ್ಳುತ್ತಿದ್ದು, ಕೇವಲ ಗೆಳೆಯರು ಮತ್ತು ಬಂಧುಗಳನ್ನು ಮಾತ್ರ ಆಹ್ವಾನಿಸಿದ್ದಾರೆ.
ಉಳಿದವರು ಕಂಡಂತೆ ಚಿತ್ರದ ಮೂಲಕ ಸ್ಯಾಂಡಲ್‍ವುಡ್‍ನಲ್ಲಿ ಬೆಳಕಿಗೆ ಬಂದ ನಿರ್ದೇಶಕ ರಿಷಬ್. ಆ ಬಳಿಕ ನಿರ್ದೇಶಿಸಿದ ರಿಕ್ಕಿ ಚಿತ್ರವೂ ಯಶಸ್ವಿಯಾಯಿತು. ಕಿರಿಕ್ ಪಾರ್ಟಿ ಬಗ್ಗೆ ಹೇಳುವಂತೆಯೇ ಇಲ್ಲ ಬಿಡಿ. ಹೊಸ ಬಾಳಿನ ಹೊಸಿಲಲಿ ನಿಂತಿರುವ ಹೊಸ ಜೋಡಿಗೆ ಶುಭವಾಗಲಿ ಎಂದು ಹಾರೈಸೋಣ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.