ನ್ಯಾಯಾಂಗ ನಿಂದನೆ ಎದುರಿಸುತ್ತಿರುವ ಅಕ್ಷಯ್ ಕುಮಾರ್ ನಟನೆಯ ಜಾಲಿ ಎಲ್‌ಎಲ್‌ಬಿ 2 ಚಿತ್ರದ ನಾಲ್ಕು ದೃಶ್ಯಗಳಿಗೆ ಕತ್ತರಿ ಹಾಕಲು ಚಿತ್ರ ನಿರ್ದೇಶಕರು ಒಪ್ಪಿದ್ದು, ಆ ಮೂಲಕ ಚಿತ್ರ ಶುಕ್ರವಾರ ಬಿಡುಗಡೆಗೆ ಸಿದ್ಧವಾಗಿದೆ.
ಬಾಲಿ ಎಲ್‌ಎಲ್‌ಬಿ 2 ಚಿತ್ರ ಬಿಡುಗಡೆಗೆ ಕೇಂದ್ರ ಸೆನ್ಸಾರ್ ಮಂಡಳಿ ಹಸಿರು ನಿಶಾನೆ ತೋರಿಸಿತ್ತು. ಆದರೆ ಚಿತ್ರದಲ್ಲಿ ನ್ಯಾಯಾಂಗ ವ್ಯವಸ್ಥೆಗೆ ಅವಮಾನ ಉಂಟು ಮಾಡುವಂತಹ ದೃಶ್ಯಗಳಿವೆ. ಹೀಗಾಗಿ ಅವುಗಳನ್ನು ಕತ್ತರಿಸಬೇಕು. ಆನಂತರವೇ ಅದರ ಬಿಡುಗಡೆಗೆ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಬಾಂಬೆ ಹೈಕೋರ್ಟ್ ಸೋಮವಾರ ಆದೇಶಿಸಿತ್ತು.
ನ್ಯಾ.ಪ್ರಕಾಶ್ ಕಾನಡೆ ನೇತೃತ್ವದ ಸಮಿತಿ ಚಿತ್ರ ವೀಕ್ಷಣೆ ನಂತರ ಸಲ್ಲಿಸಿದ್ದ ವರದಿಯನ್ನು ಪರಿಸೀಲಿಸಿದ ಎಸ್.ಎಸ್ ಶಿಂಧೆ ಮತ್ತು ಕೆ.ಕೆ ಸೋನಾವಾಲ್ ಇದ್ದ ನ್ಯಾಯಪೀಠ ಈ ಆದೇಶ ನೀಡಿದೆ. ಇದನ್ನು ಪ್ರಶ್ನಿಿಸಿ ಚಿತ್ರತಂಡ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಆದರೆ ತಮ್ಮ ನಿರ್ಧಾರವನ್ನು ಕೈಬಿಟ್ಟು ಬಾಂಬೆ ಹೈಕೋರ್ಟ್ ಆದೇಶಕ್ಕೆ ತಲೆ ಬಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.