Publish Date: Fri, 21 Oct 2016 (09:09 IST)
Updated Date: Fri, 21 Oct 2016 (11:52 IST)
ಬೆಂಗಳೂರು: ಜೀ ಕನ್ನಡ ವಾಹಿನಿಯ ಪ್ರಶಸ್ತಿ ಸಮಾರಂಭ ಈ ವಾರಂತ್ಯಕ್ಕೆ ಟಿವಿಯಲ್ಲಿ ಪ್ರಸಾರವಾಗಲಿದೆ.
ಜೀ ಕನ್ನಡ ಸಂಸ್ಥೆಯ ಧಾರವಾಹಿ ಮತ್ತು ರಿಯಾಲಿಟಿ ಶೋಗಳ ವಿವಿಧ ವಿಭಾಗಗಳಿಗೆ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ. ಈ ಬಾರಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅತಿಥಿಯಾಗಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ.
ದರ್ಶನ್ ಜತೆ ಜೀ ಕನ್ನಡದ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದ ಚಿಣ್ಣರು ವೇದಿಕೆ ಮೇಲಿರುವ ಫೋಟೋಗಳು ಈಗಾಗಲೇ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದೆ. ವರ್ಣರಂಜಿತ ಕಾರ್ಯಕ್ರಮದಲ್ಲಿ ಡ್ರಾಮಾ ಜ್ಯೂನಿಯರ್ಸ್ ಸ್ಪರ್ಧಿಗಳ ಕಾರ್ಯಕ್ರಮವಿರಲಿದೆ.
ರಮೇಶ್ ಅರವಿಂದ್, ಸುಂದರಂ ಮಾಸ್ಟರ್ ರಚಿತಾ ರಾಂ, ಜಗ್ಗೇಶ್, ರಕ್ಷಿತಾ ಅವರನ್ನು ನೋಡಬೇಕಾದರೆ ಶನಿವಾರ ಮತ್ತು ಭಾನುವಾರ 7 ಗಂಟೆಯಿಂದ ಜೀ ಕನ್ನಡ ನೋಡಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ