Publish Date: Wed, 19 Oct 2016 (09:06 IST)
Updated Date: Wed, 19 Oct 2016 (12:15 IST)
ಬೆಂಗಳೂರು: ಝೀ ಕನ್ನಡ ವಾಹಿನಿಯಲ್ಲಿ ಎರಡು ಕಂತು ಪೂರೈಸಿರುವ ವೀಕೆಂಡ್ ವಿದ್ ರಮೇಶ್ ಎಲ್ಲಾ ವರ್ಗದ ಪ್ರೇಕ್ಷಕರ ಅಚ್ಚುಮೆಚ್ಚಿನ ಕಾರ್ಯಕ್ರಮವಾಗಿತ್ತು. ಅದು ಮುಕ್ತಾಯವಾದಾಗ ಎಷ್ಟೋ ಜನ ಮಗಿದೇ ಹೋಯ್ತಲ್ಲಾ ಎಂದು ಬೇಸರ ಪಟ್ಟುಕೊಂಡಿದ್ದೂ ಇದೆ.
ಆದರೆ ಬೇಸರಪಡಬೇಕಾದ ಅಗತ್ಯವಿಲ್ಲ. ಮತ್ತೆ ಡಿಸೆಂಬರ್ ತಿಂಗಳಿನಲ್ಲಿ ವೀಕೆಂಡ್ ವಿದ್ ರಮೇಶ್ ಕಾರ್ಯಕ್ರಮ ಶುರುವಾಗುತ್ತದಂತೆ.
ಎಲ್ಲಾ ಅಂದುಕೊಂಡಂತೆ ಆದರೆ ಈ ಬಾರಿಯಾದರೂ ವಿವಿಧ ಕ್ಷೇತ್ರದ ಸಾಧಕರನ್ನು ಸಾಧಕರ ಸೀಟಿನಲ್ಲಿ ಕೂರಿಸಿ ಅವರ ಬದುಕಿನ ಕತೆ ಕೇಳುವ ಉತ್ಸಾಹದಲ್ಲಿ ರಮೇಶ್ ಇದ್ದಾರೆ.
ಕಿಚ್ಚ ಸುದೀಪ್ ಅವರ ಮೆಗಾ ಎಪಿಸೋಡ್ ಮೂಲಕ ಕಳೆದ ಸೀಸನ್ ಮುಕ್ತಾಯಗೊಂಡಿತ್ತು. ಇದುವರೆಗೆ ಸಿನಿಮಾ ಕ್ಷೇತ್ರಕ್ಕೆ ಸಂಬಂಧಪಟ್ಟವರೇ ಅತಿಥಿಗಳಾಗಿ ಬರುತ್ತಿದ್ದರು ಎಂಬ ಆಕ್ಷೇಪವೂ ಅಭಿಮಾನಿಗಳಲ್ಲಿದೆ. ಈ ಬಾರಿಯಾದರೂ ಬೇರೆ ಕ್ಷೇತ್ರದ ಸಾಧಕರನ್ನು ನೋಡುವ ನಿರೀಕ್ಷೆ ಪ್ರೇಕ್ಷಕರದ್ದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ