Select Your Language

Notifications

webdunia
webdunia
webdunia
webdunia

ವೆಬ್ ದುನಿಯಾ ಜತೆ ರಮೇಶ್ ಅರವಿಂದ್

ವೆಬ್ ದುನಿಯಾ ಜತೆ ರಮೇಶ್ ಅರವಿಂದ್
Bangalore , ಬುಧವಾರ, 19 ಅಕ್ಟೋಬರ್ 2016 (08:59 IST)
ತಮ್ಮಅಭಿನಯದ ಪುಷ್ಪಕ ವಿಮಾನ ನವಂಬರ್ ತಿಂಗಳಿನಲ್ಲಿ ತೆರೆಕಾಣುತ್ತಿರುವ ಹಿನ್ನೆಲೆಯಲ್ಲಿ ನಟ, ನಿರ್ದೇಶಕ ರಮೇಶ್ ಅರವಿಂದ್ ಅವರನ್ನು ವೆಬ್ ದುನಿಯಾ ಮಾತನಾಡಿಸಿದಾಗ ಅವರು ಹೇಳಿದ್ದು ಹೀಗೆ:

ಪುಷ್ಪಕ ವಿಮಾನ ಯಾವಾಗ ರಿಲೀಸ್?
ನವಂಬರ್ ನಲ್ಲಿ ರಿಲೀಸ್. ಇದೊಂದು ಥರಾ ಹೃದಯವನ್ನು ಚಿವುಟುವ, ಭಾವನೆಗೆ ತಟ್ಟುವ ಸಿನಿಮಾ. ಬುದ್ಧಿಮಾಂದ್ಯ ಅಪ್ಪ ಮತ್ತು ಪುಟ್ಟ ಮಗಳ ನಿಷ್ಕಲ್ಮಷ ಹೃದಯಗಳ ಕತೆ. ಖಂಡಿತಾ ಈ ದಿನಗಳಿಗೆ ಇದೊಂದು ಹೊಸ ಪ್ರಯತ್ನ, ಹೊಸ ಕತೆ, ಹೊಸ ಸಿನಿಮಾ. ಒಂದೊಂದು ಹಾಡುಗಳೂ ಅದ್ಭುತ ಭಾವಗೀತೆಯ ಹಾಗಿದೆ.

ಅಪ್ಪ-ಮಗಳ ಕತೆ ಅಂತ ಹೇಳ್ತಾರೆ. ಒಬ್ಬ ಅಪ್ಪನಿಗೆ ಅಥವ ಮಗಳಿಗೆ ಇದರಲ್ಲಿ ಏನು ಮೆಸೇಜ್ ಇದೆ?
ಮೆಸೇಜ್  ಅನ್ನುವುದಕ್ಕಿಂತ ಭಾವನೆಗಳೇ ಎಲ್ಲಕ್ಕಿಂತ ದೊಡ್ಡದು ಎಂಬುದು ಈ ಚಿತ್ರದ ಸಾರಾಂಶ.  
ನಿಮ್ಮ ಮಗಳು ಈ ಚಿತ್ರದ ಬಗ್ಗೆ ಏನು ಹೇಳುತ್ತಾರೆ?

ನನ್ನ ಮಗಳು ಅಂತ ಮಾತ್ರವಲ್ಲ, ಮನೆಯಲ್ಲಿ ಎಲ್ಲರೂ ಇಷ್ಟಪಟ್ಟಿದ್ದಾರೆ. ಟ್ರೇಲರ್ ನೋಡಿ ಅವಳಿಗೆ ತುಂಬಾ ಖುಷಿಯಾಯ್ತು. ಚಿತ್ರದಲ್ಲಿ ಅಭಿನಯಿಸಿದ ಪುಟ್ಟ ಹುಡುಗಿ ಯುವಿನಾ ನೋಡಿದ್ರೆ ಚಿಕ್ಕ ವಯಸ್ಸಿನಲ್ಲಿ ನನ್ನ ಮಗಳು ಹೇಗಿದ್ದಳೋ ಹಾಗೇ ಅನಿಸುತ್ತಾ ಇತ್ತು. ನನ್ನ ಇಷ್ಟು ವರ್ಷದ ಚಿತ್ರ ಜೀವನದಲ್ಲಿ ನಾನು ಇಂತಹದ್ದೊಂದು ಸಿನಿಮಾ ಮಾಡಿಲ್ಲ. ನನ್ನ ಹಳೆಯ ಚಿತ್ರಗಳಂತೇ ಇದೆ. ಅಷ್ಟು ಅದ್ಭುತವಾಗಿದೆ.

ಜುಹಿ ಚಾವ್ಲಾ ಪಾತ್ರ ಮತ್ತು ಅವರ ಜತೆ ನಟಿಸಿದ ಅನುಭವ ಹೇಳಿ?
ನನ್ನ ನೂರನೇ ಚಿತ್ರ ಎನ್ನುವ ಕಾರಣಕ್ಕೆ ಅವರು ಅಭಿಮಾನ  ಇಟ್ಟುಕೊಂಡು ಎಷ್ಟೋ ವರ್ಷದ ನಂತರ ಕನ್ನಡಕ್ಕೆ ಬಂದರು. ಒಂದು ಹಾಡಿನಲ್ಲಿ ಮಾತ್ರ ಅವರು ಕಾಣಿಸಿಕೊಂಡಿದ್ದಾರೆ. ಅದರಲ್ಲಿ ನಾನೂ ಹೆಜ್ಜೆ ಹಾಕಿದ್ದೇನೆ. ಇಲ್ಲಿಂದ ಹೋದ ಮೇಲೂ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಈ ಬಗ್ಗೆ ಹೇಳಿಕೊಂಡು ಖುಷಿಪಟ್ಟಿದ್ದರು.

ಒಂದು ಒಳ್ಳೆ ಚಿತ್ರ ಮಾಡಿದರೆ ಖಂಡಿತಾ ಪ್ರೇಕ್ಷಕರು ಥಿಯೇಟರ್ ಗೆ ಬರೋದಿಕ್ಕೆ ಇಂಟರೆಸ್ಟ್ ತೋರಿಸ್ತಾರೆ. ನಿವೇನಂತೀರಾ?
ಖಂಡಿತಾ ಬರ್ತಾರೆ. ಒಂದು ಅದ್ಭುತ ಚಿತ್ರ ಮಾಡಿದರೆ ಪ್ರೇಕ್ಷಕರು ಮೆಚ್ಚಿಕೊಳ್ಳದೇ ಇರುವುದಿಲ್ಲ. ನಮ್ಮ
ಪುಷ್ಪಕ ವಿಮಾನ ಸಿನಿಮಾದ ಟ್ರೇಲರ್ ಗೇ ಯೂಟ್ಯೂಬ್ ನಲ್ಲಿ ಲಕ್ಷಗಟ್ಟಲೆ ಲೈಕ್ ಬಂದಿರುವುದೇ ಇದಕ್ಕೆ ಸಾಕ್ಷಿ.

ಹಾಗಿದ್ರೆ ನಟರು ರಿಯಾಲಿಟಿ ಶೋನಲ್ಲಿ ಭಾಗವಹಿಸಿದರೆ ಜನ ಥಿಯೇಟರ್ ಗೆ ಬರೋಲ್ಲ ಎನ್ನುವುದು ಸುಳ್ಳು ಅನಿಸುತ್ತಾ?

ರಿಯಾಲಿಟಿ ಶೋಗಳಿಂದ ಸಿನಿಮಾ ಹಾಳಾಗುತ್ತೆ ಎನ್ನುವುದು ಸರಿಯಲ್ಲ. ಕತೆಯಲ್ಲಿ ಸತ್ವ ಇದ್ದರೆ ಜನ ಬಂದೇ ಬರ್ತಾರೆ.
ಹಾಗಿದ್ರೆ ನಿರ್ಮಾಪಕರ ವಾದಕ್ಕೆ ಅರ್ಥವಿಲ್ಲ ಅಂತೀರಾ?

ಅರ್ಥವಿಲ್ಲ ಅಂತ ಅಲ್ಲ. ಅವರಿಗೂ ಸಿನಿಮಾ ಬಗ್ಗೆ ಕಾಳಜಿಯಿಂದ ಹೇಳ್ತಾರಷ್ಟೆ. ಅವರು ರಿಯಾಲಿಟಿ ಶೋ ಮಾಡಲೇ ಬೇಡಿ ಅಂತಿಲ್ಲ. ವೀಕೆಂಡ್ ನಲ್ಲಿ ಇಟ್ಟುಕೊಳ್ಳಬೇಡಿ ಅಂತಿದ್ದಾರಷ್ಟೆ. ಆ ದಿನಗಳಲ್ಲೇ ಅಲ್ವಾ ಜನ ಥೇಟರ್ ಕಡೆಗೆ ಬರೋದು. ಆದರೆ ಕೆಲವು ಕಾರ್ಯಕ್ರಮಗಳಿಗೆ ಕೆಲವು ತಜ್ಞರೇ ಬೇಕು. ಉದಾಹರಣೆಗೆ ಕಾಮಿಡಿ ಶೋ ಒಂದನ್ನು ಜಗ್ಗೇಶ್ ಗಿಂಗ ಚೆನ್ನಾಗಿ ಯಾರು ಜಡ್ಜ್ ಮಾಡಲು ಸಾಧ್ಯ?

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಹ್ಯಾಟ್ರಿಕ್ ಹೀರೋ ಕಾವೇರಿ ರತ್ನ ಪ್ರಶಸ್ತಿ